ಸುಳ್ಯ: ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಸನ್ನ ಎನ್.ಹೆಚ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಆಡಳಿತ ಮಂಡಳಿಯಾದ ದ.ಕ ಗೌಡ ವಿದ್ಯಾ ಸಂಘ, ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಶಾರದಾ ಪ್ರೌಢಶಾಲೆಯ ವತಿಯಿಂದ
ಸಮಾರಂಭವನ್ನು ಆಯೋಜಿಸಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಢ್ಪಂಗಾಯ, ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್ ಮತ್ತು ಅತಿಥಿಗಳು ಪ್ರಸನ್ನ ಎನ್.ಹೆಚ್ ಹಾಗೂ ಪತ್ನಿ ರವಿಶ್ರೀ ಅವರನ್ನು ಸನ್ಮಾನಿಸಿದರು. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ಮುಖ್ಯ ಅತಿಥಿಯಾಗಿದ್ದರು. ಗೌಡ ವಿದ್ಯಾಸಂಘದ ನಿರ್ದೇಶಕರಾದ ಜಯರಾಮ ಚಿಲ್ತಾಡ್ಕ, ಡಾ.ಸಾಯಿ ಗೀತಾ, ಉಮೇಶ್ ಮಳವೇಲು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶಾರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸ್ವರ್ಣಕಲಾ ಎ.ಎಸ್, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ನಿವೃತ್ತ ಪ್ರಾಂಶುಪಾಲೆ ದಯಾಮಣಿ.ಕೆ. ಅಭಿನಂದನಾ ಭಾಷಣ ಮಾಡಿದರು.ಆಂಗ್ಲ ಭಾಷಾ ಉಪನ್ಯಾಸಕಿ ಸ್ವಾತಿ ಅಭಿನಂದನಾ ಪತ್ರ ವಾಚಿಸಿದರು.ಕನ್ನಡ ಉಪನ್ಯಾಸಕಿ ಗಾಯತ್ರಿ ವಂದಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕ ದಾಮೋದರ ಎನ್.ಕಾರ್ಯಕ್ರಮವನ್ನು ನಿರೂಪಿಸಿದರು.







