ಸುಳ್ಯ:ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ತಾಲೂಕು ಗೌಡ ಮಹಿಳಾ ಘಟಕ ಇದರ ಆಶ್ರಯದಲ್ಲಿ ಮಹಿಳಾ ಘಟಕದ ‘ವರ್ಷ ಸಂಭ್ರಮ’ ಕಾರ್ಯಕ್ರಮ ಸಾಂದೀಪ್ ವಿಶೇಷ ಶಾಲೆಯಲ್ಲಿ ನಡೆಯಿತು.
ಡಾ.ಸಾಯಿಗೀತ ಜ್ಞಾನೇಶ್ ಉದ್ಘಾಟಿಸಿದರು.ತಾಲೂಕು ಗೌಡ ಮಹಿಳಾ ಘಟಕದ
ಅಧ್ಯಕ್ಷೆ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸಿದ್ದರು.ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಪಿ.ಸಿ ಜಯರಾಮ, ನಿತ್ಯಾನಂದ ಮುಂಡೋಡಿ, ಚಂದ್ರ ಕೋಲ್ಚಾರ್, ಎಂ.ಬಿ. ಪೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ, ಸಾಂದೀಪ್ ಶಾಲೆಯ ಮುಖ್ಯಶಿಕ್ಷಕಿ ಹರಿಣಿ ಸದಾಶಿವ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ, ಗೌಡರ ಯುವ ಸೇವಾ ಸಂಘದ ಗೌರವಾಧ್ಯಕ್ಷ ದಿನೇಶ್ ಮಡಪ್ಪಾಡಿ, ತರುಣ ಘಟಕದ ಅಧ್ಯಕ್ಷ ಪ್ರೀತಂ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಆಸ್ತಿಕ್ ರಾಘವ್ ಅವರಿಗಡ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಸಾಂದೀಪ್ ಶಾಲೆಯ ಮಕ್ಕಳಿಂದ ನೃತ್ಯ ನಡೆಯಿತು
ಶಾಲೆಗೆ ಕ್ಯಾರಂ ಬೋರ್ಡ್ ಹಾಗೂ ಇತರ ಆಟಿಕೆಗಳನ್ನು ನೀಡಲಾಯಿತು.














