ಸುಳ್ಯ:ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಇಂದು ಸಮಾಜ ಸೇವೆ, ಶೈಕ್ಷಣಿಕ ಕೊಡುಗೆಗಳ ಮೂಲಕ ಮನೆ ಮಾತಾಗಿದೆ. ಸಮಾಜ ಸೇವೆಯೇ ರೋಟರಿಯ ಧ್ಯೇಯ ಎಂದು
ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಎಂ.ಲಕ್ಷ್ಮೀ ನಾರಾಯಣ ಹೇಳಿದ್ದಾರೆ. ಅವರು ರಥಬೀದಿಯ ರೋಟರಿ ಸಭಾಂಗಣದಲ್ಲಿ ನಡೆದ
ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೋಟರಿ ಕ್ಲಬ್ ಸದಸ್ಯರು, ಪದಾಧಿಕಾರಿಗಳು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ಲಬ್ನ ಚಟುವಟಿಕೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು.
ನೂತನ ಅಧ್ಯಕ್ಷ ಆನಂದ ಖಂಡಿಗ, ಕಾರ್ಯದರ್ಶಿ ಕಸ್ತೂರಿಶಂಕರ್, ಖಜಾಂಜಿ ಆಶಿತಾ ಕೇಶವ್ ನೇತೃತ್ವದ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ತಂಡ ಪದಗ್ರಹಣ ಮಾಡಿ ಅಧಿಕಾರ ವಹಿಸಿಕೊಂಡರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ನೋನಲ್ ಜಯ್ರಾಜ್ ಭಂಡಾರಿ ಪದಗ್ರಹಣ ನೆರವೇರಿಸಿದರು. ನಿರ್ಗಮನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧಿಕಾರ ಹಸ್ತಾಂತರಿಸಿದರು. ಮುಖ್ಯ ಅತಿಥಿಯಾಗಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಭಾಗವಹಿಸಿದ್ದರು. ನೂತನ ಕಾರ್ಯದರ್ಶಿ ಕಸ್ತೂರಿ ಶಂಕರ್, ಶೋಬಾ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಅಂಗನವಾಡಿಗೆ ಕೊಡುಗೆ ನೀಡಲಾಯಿತು. ಚಂದ್ರಶೇಖರ ಪೇರಾಲು ಸ್ವಾಗತಿಸಿ, ಕಸ್ತೂರಿ ಶಂಕರ್ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳು: 2023-24ನೇ ಸಾಲಿನಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯರಾಗಿ ಆನಂದ ಖಂಡಿಗ, ಕಾರ್ಯದರ್ಶಿಯಾಗಿ ಕಸ್ತೂರಿ ಶಂಕರ್ ನಿಸರ್ಗ, ಖಜಾಂಜಿಯಾಗಿ ಆಶಿತ ಕೇಶವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ರಾಮ್ಮೋಹನ್ ಕೆ.ಎನ್. ಸಾರ್ಜೆಂಟ್ ಮಾಧವ ಬಿ.ಟಿ, ಸಮುದಾಯ ಸೇವೆ ನಿರ್ದೇಶಕರಾಗಿ ಬಾಲಕೃಷ್ಣ ಎಸ್.ಬಿ ಲ್ಯಾಬ್, ಜಿಲ್ಲಾ ಯೋಜನಾ ನಿರ್ದೇಶಕರಾಗಿ ಡಾ.ಶ್ರೀಕೃಷ್ಣ ಬಿ.ಎನ್, ವೃತ್ತಿ ಸೇವೆ ನಿರ್ದೇಶಕರಾಗಿ ಮಧುಸೂದನ್, ಕ್ಲಬ್ ತರಬೇತಿ ಅಧಿಕಾರಿಯಾಗಿ ಸಿ.ಎ ಗಣೇಶ್ ಭಟ್, ಯೂತ್ ಸರ್ವೀಸ್ ನಿರ್ದೇಶಕರಾಗಿ ಡಾ. ಪುರುಷೋತ್ತಮ ಕೆ.ಜಿ, ಐಪಿಪಿ ಚಂದ್ರಶೇಖರ್ ಪೇರಾಲು, ಕ್ಲಬ್ ಸೇವೆ ನಿರ್ದೇಶಕರಾಗಿ ಯೋಗಿತಾ ಗೋಪಿನಾಥ್, ರೊಟರಿ ಫೌಂಡೇಶನ್ ನಿರ್ದೇಶಕರಾಗಿ ಪ್ರಭಾಕರನ್ ನಾಯರ್, ಪೋಲಿಯೊ ಪ್ಲಸ್ ನಿರ್ದೇಶಕರಾಗಿ ಸೀತಾರಾಮ ರೈ ಸವಣೂರು, ಅಂತರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಸತೀಶ್ ಕೆ.ಜಿ, ಐ.ಟಿ ಮತ್ತು ವೆಬ್ ಸೇವಾ ನಿರ್ದೇಶಕರಾಗಿ ಸನತ್ ಪೆರಿಯಡ್ಕ, ಸದಸ್ಯತ್ವ ಅಭಿವೃದ್ಧಿ ನಿರ್ದೇಶಕರಾಗಿ ಹರಿರಾಯ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ.