ಮಡಿಕೇರಿ:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹಾಗೂ ಕುಟುಂಬದ ಸದಸ್ಯರು ಮಡಿಕೇರಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಡಿಕೇರಿಗೆ ಆಗಮಿಸಿರುವ
ಸುರೇಶ್ ರೈನಾ ಕುಟುಂಬ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಸುರೇಶ್ ರೈನಾ ಅವರು ಪತ್ನಿ ಪ್ರಿಯಾಂಕ ಚೌಧರಿ, ಪುತ್ರಿ ಗ್ರೇಶಿಯಾ ರೈನಾ ಹಾಗೂ ಪುತ್ರ ರಿಯೋ ರೈನಾ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿ ಕುಟುಂಬದ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದರು.
ಬುಧವಾರ ರಾತ್ರಿ ಮಡಿಕೇರಿಗೆ ತೆರಳುವ ಸಂದರ್ಭದಲ್ಲಿ ಸುರೇಶ್ ರೈನಾ ಅವರು ಸುಳ್ಯದ ರಸಪಾಕ ಗ್ರ್ಯಾಂಡ್ ಹೋಟೆಲ್ಗೆ ಆಗಮಿಸಿ ಚಹಾ ಸೇವಿಸಿ ತೆರಳಿದ್ದರು.















