ದೋಹಾ:ಎಸಿಸಿ ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಮೊದಲ ಸೆಮಿಫೈನಲ್ನಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಭಾರತ ‘ಎ’ ತಂಡ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 50 ಓವರ್ಗಳಲ್ಲಿ
8 ವಿಕೆಟ್ ನಷ್ಟಕ್ಕೆ 317 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.ಶ್ರೀಲಂಕಾ ಎ 41.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 318 ರನ್ ಬಾರಿಸಿ 8 ವಿಕೆಟ್ ಗೆಲುವು ದಾಖಲಿಸಿತು. ಶ್ರೀಲಂಕಾ ಆರಂಭಿಕರಾದ ಸಿನೆತ್ ಜಯವರ್ಧನೆ (105) ಮತ್ತು ಲಸಿತ್ ಕ್ರೂಸ್ಪುಲ್ಲೆ (116) ಮೊದಲ ವಿಕೆಟ್ಗೆ ಕೇವಲ 21.3 ಓವರ್ಗಳಲ್ಲಿ 174 ರನ್ ಚಚ್ಚಿದರು. ಭಾರತದ ಪರ ನಾಯಕ ತಿಲಕ್ ವರ್ಮಾ (53),ಅಭಿಷೇಕ್ ಶರ್ಮಾ (78) ಮತ್ತು ಶಹಬಾಜ್ ಅಹ್ಮದ್ (54), ವೈಭವ್ ಸೂರ್ಯವಂಶಿ(40) ಉತ್ತಮ ಆಟವಾಡಿದರು.















