ಸುಳ್ಯ:ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನಲ್ಲಿ ಉಪನ್ಯಾಸಕರಾಗಿರುವ ಉಮಾಶಂಕರ ಕೇಳತ್ತಾಯ ಅವರಿಗೆ ಪಿಎಚ್ಡಿ ಪದವಿ.ಉಮಾಶಂಕರ ಕೇಳತ್ತಾಯರವರು ಮಂಡಿಸಿದ ‘ಮೈನಸ್ ಪಾರ್ಷಿಯಲ್ ಆರ್ಡರ್ ಆಂಡ್ ಜನರಲೈಸ್ಡ್ ಇನ್ವರ್ಸಸ್’ ಎಂಬ
ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ಈ ಮಹಾಪ್ರಬಂಧವನ್ನು ಡಾ. ಕೆ ಮಂಜುನಾಥ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಉಮಾಶಂಕರ ಅವರು ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ನಾರಾಯಣ ಕೇಳತ್ತಾಯ ಹಾಗೂ ಸುಮಂಗಲಾ ದಂಪತಿಗಳ ಪುತ್ರ.