ಬೆಂಗಳೂರು: ಥಾಯ್ಲ್ಯಾಂಡಿನ ಬ್ಯಾಂಕಾಕ್ನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ತಿರಕ್ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಸಮೃದ್ಧ್ ಬಿ.ಎಲ್.ಕಂಚಿನ ಪದಕ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕಲ್ಲಪಳ್ಳಿಯ ಆಲುಗುಂಜದ ತನುಜ ಎ.ಪಿ ಹಾಗು ಲಕ್ಷ್ಮೀಶ ದಂಪತಿಗಳ ಪುತ್ರ ಸಮೃದ್ಧ್ ಬೆಂಗಳೂರಿನ ಎನ್ಎಂಎಚ್ ಗ್ಲೋಬಲ್ ಸ್ಕೂಲ್ನ 8ನೇ ತರಗತಿಯ ವಿದ್ಯಾರ್ಥಿ. ಕೋಚ್ ವೆಟ್ರಿವೇಲ್ ಮಾರ್ಗದರ್ಶನದಲ್ಲಿ ವೆಟ್ರಿ ಟೇಕ್ವಾಂಡೋ ಅಕಾಡೆಮಿಯಲ್ಲಿ 4 ವರ್ಷಗಳಿಂದ ಟೇಕ್ವಾಂಡೋ ಅಭ್ಯಸಿಸುತ್ತಾರೆ. ಈ ಹಿಂದೆ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಮೃದ್ಧ್ ಪದಕ ಪಡೆದಿದ್ದರು.














