ಬೆಂಗಳೂರು:ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಒಟ್ಟು ಸ್ಥಾನಗಳ ಸಂಖ್ಯೆ, ವರ್ಗವಾರು ಮೀಸಲಾತಿ ಸ್ಥಾನಗಳ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕ್ಷೇತ್ರ ಪುನರ್ವಿಂಗಡಣೆ, ಕ್ಷೇತ್ರವಾರು ಮೀಸಲಾತಿ ಅಧಿಸೂಚನೆ ಇನ್ನಷ್ಟೇ ಹೊರಬೀಳಬೇಕಿದೆ.
ರಾಜ್ಯದ 31 ಜಿಲ್ಲಾ ಪಂಚಾಯಿತಿಗಳಲ್ಲಿ ಒಟ್ಟು 1,129 ಹಾಗೂ
ತಾಲ್ಲೂಕು ಪಂಚಾಯಿತಿಗಳಲ್ಲಿ 3,656 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಿಡಲಾಗಿದೆ.‘ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಮೀಸಲಾತಿ ಪಟ್ಟಿ ಪ್ರಕಟಿಸಿ ಆಕ್ಷೇಪ ಸಲ್ಲಿಕೆಗೆ 10 ದಿನಗಳ ಅವಕಾಶ ನೀಡಲಾಗುವುದು. ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಹಸ್ತಾಂತರ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪಟ್ಟಿಯನ್ನು ಎರಡು ದಿನಗಳ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಅದು ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.
ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕ್ಷೇತ್ರವಾರು ಮೀಸಲಾತಿ ಪಟ್ಟಿಗೆ ಚುನಾವಣಾ ಆಯೋಗ ಸಮ್ಮತಿ ಸೂಚಿಸಿದರೆ, ಜನವರಿ ಮೊದಲ ವಾರವೇ ಚುನಾವಣೆ ನಡೆಸುವ ಕುರಿತು ಮಂಗಳವಾರ ನಡೆದಿದ್ದ ಸಂಪುಟ ಸಭೆಯಲ್ಲೇ ಚರ್ಚೆ ನಡೆದಿತ್ತು.
ಸುಳ್ಯದಲ್ಲಿ ತಾ.ಪಂ.ನಲ್ಲಿ ಎಷ್ಟು ಸ್ಥಾನ..?
ಸುಳ್ಯ ತಾಲೂಕು ಪಂಚಾಯತ್ನಲ್ಲಿ 11 ಸ್ಥಾನಗಳಿದ್ದು 6 ಸ್ಥಾನ ಮಹಿಳೆಗೆ ಮೀಸಲಾಗಿದೆ.ಸಾಮಾನ್ಯ ವರ್ಗಕ್ಕೆ 6 ಸ್ಥಾನ ಇದೆ(3 ಮಹಿಳೆ), ಅನುಸೂಚಿತ ಜಾತಿ 2(1ಮಹಿಳೆ), ಅನುಸೂಚಿತ ಪಂಗಡ1(ಮಹಿಳೆ), ಹಿಂದುಳಿದ ವರ್ಗ ಎ 2(1 ಮಹಿಳೆ) ಎಂಬಂತೆ ಮೀಸಲಾತಿ ಪ್ರಕಟವಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಒಟ್ಟು 35 ಸ್ಥಾನಗಳಿವೆ.







