ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಎಡನೀರು ಮಠಕ್ಕೆ ಭೇಟಿ ನೀಡಿದರು. ರಾಜ್ಯ ಮುಖ್ಯಮಂತ್ರಿಯಾದ ಬಳಿಕ ಕಾಸರಗೋಡಿಗೆ ಮೊದಲ ಬಾರಿ ಆಗಮಿಸಿದ ವಿ. ಡಿ. ಸತೀಶನ್ ಅವರು ಎಡನೀರು ಮಠಕ್ಕೆ ಭೇಟಿ ನೀಡಿದ ಸಂದರ್ಭ
ಮಠಾಧೀಶರಾದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಮಠದ ಪರವಾಗಿ ರಾಷ್ಟ್ರ ಲಾಂಛನದ ಸ್ಮರಣಿಕೆ ಸಹಿತ ಮಂತ್ರಾಕ್ಷತೆಯೊಂದಿಗೆ ಸಿಎಂ ನ್ನು ಹರಸಿದರು. ಶ್ರೀಗಳವರೊಂದಿಗೆ ಮಾತನಾಡಿದ ಸಿಎಂ ಎಡನೀರು ಮಠ ಪರಂಪರೆ ಕೇಳಿ ತಿಳಿದುಕೊಂಡರು. ಶ್ರೀಮಠದ ಪರವಾಗಿ ರಾಜೇಂದ್ರ ಕಲ್ಲೂರಾಯ, ಸೂರ್ಯ ಭಟ್ ಎಡನೀರು, ಸತೀಶ್ ಎಡನೀರು ಮೊದಲಾದವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳು

ಪ್ರೀತಿಯಿಂದ ಸ್ವಾಗತಿಸಿದರು. ಮುಖ್ಯಮಂತ್ರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಹಸ್ತಲಾಘವ ಮಾಡಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ನೀಲಕಂಠನ್, ಕಲ್ಲಟ್ರ ಮಾಹಿನ್ ಹಾಜಿ ಸಹಿತ ಯುಡಿಎಫ್, ಕಾಂಗ್ರೆಸ್ ನಾಯಕರು ಜತೆಗಿದ್ದರು.















