ಸುಳ್ಯ:ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಾಗಾರ ಸುಳ್ಯದ ಪ್ರಧಾನ ಕಚೇರಿಯಲ್ಲಿ ನಡೆಯಿತು.ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.ಮಡಪ್ಪಾಡಿ ಸಹಕಾರ ಸಂಘದ
ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಂಗಂಗಯ್ಯ ಗೌಡ ಪೂಂಬಾಡಿ ಕಾರ್ಯಾಗಾರ ಉದ್ಘಾಟಿಸಿದರು.
ಮಂಗಳೂರು ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ನ ಶ್ರೀಶಾ ಕೆ.ಎಂ. ತರಬೇತಿ ನೀಡಿದರು.ವೆಂಕಟರಮಣ ಸೊಸೈಟಿ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ್, ನಿರ್ದೇಶಕರುಗಳಾದ ದಾಮೋದರ ನಾರ್ಕೋಡು, ಚಂದ್ರ ಕೋಲ್ಚಾರ್, ಪ್ರೇಮಾ, ಶೈಲೇಶ್ ಅಂಬೆಕಲ್ಲು ವೇದಿಕೆಯಲ್ಲಿ ಇದ್ದರು.ಎ.ಜಿ.ಎಂ.ಗಳಾದ ಕುಸುಮಾಧರ ಗುಡ್ಡೆ, ಮನೋಜ್ ಪಾತತ್ತಿಲ ಉಪಸ್ಥಿತರಿದ್ದರು.25 ಬ್ರಾಂಚ್ ಗಳ ಎಲ್ಲ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ದಿನೇಶ್ ಮಡಪ್ಪಾಡಿ ಸ್ವಾಗತಿಸಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಜಿ.ಎಂ. ಚಂದ್ರಶೇಖರ ಮೇರ್ಕಜೆ ವಂದಿಸಿದರು.















