ಸುಳ್ಯ:ಸುಳ್ಯ ತಾಲೂಕು ಧ್ವನಿ ಜನನಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಲೀಗ್ ಪಂದ್ಯದಲ್ಲಿ
ಮುಂಬೈ ಪೋರ್ಟ್ ತಂಡ ಜಯಭೇರಿ ಬಾರಿಸಿತು. ಪೋರ್ಟ್ ತಂಡವು 46-22 ಪಾಯಿಂಟ್ಗಳ ಅಂತರದಲ್ಲಿ ಆರ್ಡಿನೆನ್ಸ್ ಫ್ಯಾಕ್ಟರಿ ತಂಡವನ್ನು ಸೋಲಿಸಿತು. ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಮುಂಬೈ ತಂಡ ಏಕ ಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು.









