ಸುಳ್ಯ:ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ 55ನೇ ವರ್ಷದ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಅಂಗವಾಗಿ ನಡೆದ
ಸಾಂಸ್ಕೃತಿಕ ಸಂಭ್ರಮಕ್ಕೆ ಅ.23ರಂದು ರಾತ್ರಿ ತೆರೆ ಕಂಡಿತು.16ರಿಂದ ಆರಂಭಗೊಂಡು 23ರ ತನಕ ಪ್ರತಿ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಅ.23 ರಂದು ಖ್ಯಾತ ಹಿನ್ನಲೆ ಗಾಯಕಿ ಅಖಿಲ ಪಜಿಮಣ್ಣು ಮತ್ತಿತರ ಖ್ಯಾತ ಗಾಯಕರು ಭಾಗವಹಿಸಿದ ಮ್ಯೂಸಿಕ್ ಹಂಗಾಮ ನಡೆಯಿತು. ಮ್ಯೂಸಿಕ್ ಹಂಗಾಮ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಕಂಡಿತು.ಪ್ರತಿ ದಿನ ನೂರಾರು ಮಂದಿ ಆಗಮಿಸಿ ಸಾಂಸ್ಕೃತಿಕ ವೈಭವದ ವೀಕ್ಷಿಸಿದರು.









