ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಅಧ್ಯಯನ ಕೇಂದ್ರದಲ್ಲಿ ಕೀರಿಕ್ಕಾಡು
ಸುಬ್ರಹ್ಮಣ್ಯ ಭಟ್ ಸಂಸ್ಮರಣೆ – ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ಜರಗಿತು. ಆರಂಭದಲ್ಲಿ
ಭಗವದ್ಗೀತೆ ಪಾರಾಯಣದೊಂದಿಗೆ ಸ್ಥಳ ಸಾನ್ನಿಧ್ಯ ಗೋಪಾಲಕೃಷ್ಣ ದೇವರ ಪೂಜೆ ನೆರವೇರಿತು.ಕೀರಿಕ್ಕಾಡು ನಾರಾಯಣ ಭಟ್ ಬಾಳಿಲ ಮತ್ತು ಮನೆಯವರ ವತಿಯಿಂದ ಪ್ರಾಯೋಜಿಸಲ್ಪಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಮಾನಂದ ಬನಾರಿ ಮಂಜೇಶ್ವರ ವಹಿಸಿದ್ದರು.ಹಿರಿಯ ಯಕ್ಷಗಾನ ಕಲಾವಿದ ಎಂ.ರಮಾನಂದ ರೈ ದೇಲಂಪಾಡಿ ಅವರು ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣಾ ಭಾಷಣ ಮಾಡಿದರು.ಕೆ.ನಾರಾಯಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಿ ಪೃಥ್ವಿ ಪ್ರಾರ್ಥಿಸಿದರು.ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ ನಿರ್ವಹಿಸಿದರು. ಬಳಿಕ
ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ಅಳವಡಿಸಲ್ಪಟ್ಟ ತಾಳಮದ್ದಳೆಯ ಭಾಗವತರಾಗಿ ಚೆಂಡೆಗುಳಿ ನರಸಿಂಹ ಶಾಸ್ತ್ರಿ ಪುತ್ತೂರು ಅವರು ಕಾಣಿಸಿಕೊಂಡರು. ಚೆಂಡೆ ಮದ್ದಳೆ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು,ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು.
ಆರ್ಥಧಾರಿಗಳಾಗಿ ಡಾ.ಕೆ. ಸೂರ್ಯನಾರಾಯಣ ಪುತ್ತೂರು, ವೆಂಕಟೇಶ ಕುಮಾರ ಉಳುವಾನ, ರಾಮಣ್ಣ ಮಾಸ್ತರ್ ದೇಲಂಪಾಡಿ, ರಮಾನಂದ ರೈ ದೇಲಂಪಾಡಿ, ರಾಮ ನಾಯ್ಕ ದೇಲಂಪಾಡಿ, ಬಿ.ಎಚ್. ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಪಾತ್ರ ನಿರ್ವಹಣೆಗೈದರು. ನಂದಕಿಶೋರ ಬನಾರಿ ವಂದನಾರ್ಪಣೆ ಗೈದರು.









