ಚೊಕ್ಕಾಡಿ:ಎಲಿಮಲೆಯ ರಂಜನಿ ಸಂಗೀತ ಸಭಾದ ವತಿಯಿಂದ ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಸಹಕಾರದೊಂದಿಗೆ
‘ನವರಾತ್ರಿ ವೈಭವಂ’ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ಅ.25ರಂದು ಸಂಜೆ 4.30 ರಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಲಿದೆ. ರಂಜನಿ ಸಂಗೀತ ಸಭಾದ ವತಿಯಿಂದ
ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ವಿಶೇಷ ಸಂಗೀತ ಕಛೇರಿಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿಯ ‘ನವರಾತ್ರಿ ವೈಭವಂ’ ನಲ್ಲಿ ಎರಡು ಕಛೇರಿ ನಡೆಯಲಿದೆ. ಮೊದಲ ಕಛೇರಿಯಲ್ಲಿ
ಪ್ರದ್ಯುಮ್ನ ಭಟ್ ಅವರ ಹಾಡುಗಾರಿಕೆ ನಡೆಯಲಿದೆ.ವಯಲಿನ್ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ,
ಘಟಂನಲ್ಲಿ ವಿದ್ಯಾಶಂಕರ್.ಬಿ.ಆರ್. ಬೆಂಗಳೂರು ಸಹಕರಿಸಲಿದ್ದಾರೆ.
ಎರಡನೇ ಕಛೇರಿಯಲ್ಲಿ ಶ್ರೀಹರಿ ಭಟ್ ಬೆಂಗಳೂರುಅವರ ಹಾಡುಗಾರಿಕೆ ನಡೆಯಲಿದೆ.ವಯಲಿನ್ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ,ಘಟಂನಲ್ಲಿ ವಿದ್ಯಾಶಂಕರ್.ಬಿ.ಆರ್. ಬೆಂಗಳೂರು ಸಹಕರಿಸಲಿದ್ದಾರೆ.ಎಂದು ರಂಜನಿ ಸಂಗೀತ ಸಭಾದ ಗುರುಗಳಾದ ರೇಖಾ ರೇವತಿ ಹೊನ್ನಾಡಿ ಹಾಗು ನಿರ್ದೇಶಕರಾದ ಸತ್ಯನಾರಾಯಣ ಹೊನ್ನಾಡಿ ತಿಳಿಸಿದ್ದಾರೆ.










