ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯಿಕುಳಿ- ದುಗಲಡ್ಕ ಶಾಲೆಗೆ ಪುಸ್ತಕ ವಿತರಿಸಲಾಯಿತು. ತುಳು ಕುರಲ್ ಕೂಟ ದುಗ್ಗಲಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.ಜೇಸಿಐ
ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ 15ರ ವಲಯಾಡಳಿತ ಮಂಡಳಿಯ ನ್ಯೂ ಲೋಮ್ ಎಕ್ಸ್ಂಟನ್ಸ್ನ ಸಂಯೋಜಕ ಜಗದೀಶ್ ರೈ ಪೆರುವಾಜೆ ಪುಸ್ತಕ ವಿತರಿಸಿದರು.
ತುಳು ಕುರಲ್ ಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ, ಮಿತ್ರ ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಬೆಳ್ಯಪ್ಪ ಗೌಡ ಕೋಡ್ತುಗುಳಿ ಸ್ವಾಗತಿಸಿ,
ತುಳು ಕುರಲ್ ಕೂಟದ ಕಾರ್ಯದರ್ಶಿ ಭಾಗೀಶ್.ಕೆ.ಟಿ ವಂದಿಸಿದರು. ಪ್ರದೀಪ್ ಕುಮಾರ್ ರೈ ಬೆಳ್ಳಾರೆ, ಸುಪ್ರೀತ್ ಮೋಂಟಡ್ಕ, ಮಂಜುನಾಥ್ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.









