ಸುಳ್ಯ:ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ತಮ್ಮ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಜನ್ಮ ದಿನ ಪ್ರಯುಕ್ತ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ
ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ., ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಕುದ್ಪಾಜೆ,ಬೂತ್ ಅಧ್ಯಕ್ಷ ಶೀನಪ್ಪ ಪಡ್ರೆ, ಕಾರ್ಯದರ್ಶಿ ಸಚಿನ್ ದೇಂಗೋಡಿ, ಪ್ರಮುಖರಾದ ಚಂದ್ರಶೇಖರ ಅಡ್ಪಂಗಾಯ, ಚಿದಾನಂದ ಕುದ್ಪಾಜೆ, ಭರತ್ ಪಿಂಡಿಮನೆ, ಭವಾನಿ ಪ್ರಸಾದ್ ನಡುಮುಟ್ಲು, ಲೋಕೇಶ್ ಟಿ.ಎನ್, ದೀಪಕ್ ಆಚಾರ್ಯ ಕಾಯರ್ತೋಡಿ, ವಾಸುದೇವ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.








