ಲಂಡನ್: ಭಾರತ ಮತ್ತು ಇಂಗ್ಲೆಂಡ್ ಮಧ್ಯೆಯ ಮೂರನೇ ಟೆಸ್ಟ್ ಪಂದ್ಯ ರೋಚಕ ಸ್ಥಿತಿಗೆ ತಲುಪಿದೆ. ಭಾರತಕ್ಕೆ ಟೆಸ್ಟ್ ಗೆಲುವಿಗೆ ಇಂಗ್ಲೆಂಡ್193 ರನ್ ಗುರಿ ನೀಡಿದೆ. ಆದರೆ ಆರಂಭಿಕ ಆಘಾತ ಎದುರಿಸಿರುವ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 58 ರನ್ ಗಳಿಸಿದೆ. 6 ವಿಕೆಟ್ ಉಳಿದಿರುವಂತೆ ಕೊನೆಯ ದಿನ ಗೆಲುವಿಗೆ
135 ರನ್ ಅಗತ್ಯವಿದೆ. ತಲಾ 387 ರನ್ ಗಳಿಸಿ ಎರಡೂ ತಂಡಗಳು ಮೊದಲ ಇನ್ನೀಂಗ್ಸ್ ಟೈ ಮಾಡಿಕೊಂಡಿತ್ತು.ಅಮೋಘ ಬೌಲಿಂಗ್ ಆಕ್ರಮಣ ಪ್ರದರ್ಶಿಸಿದ ಭಾರತೀಯ ಬೌಲರ್ಗಳು ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನೀಂಗ್ಸ್ನಲ್ಲಿ 192 ರನ್ಗೆ ಕಟ್ಟಿ ಹಾಕಿತು. ನಾಯಕ ಬೆನ್ ಸ್ಟೋಕ್ಸ್ (33) ಮತ್ತು ಜೋ ರೂಟ್ (40) ಅವರು ಪ್ರತಿಹೋರಾಟಕ್ಕೆ ಯತ್ನಿಸಿದರೂ ಪ್ರಯೋಜನಕಾರಿಯಾಗಲಿಲ್ಲ.
ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ವಾಷಿಂಗ್ಟನ್ ಸುಂದರ್ 4 ವಿಕೆಟ್ ಉರುಳಿಸಿದರೆ ಮಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಉರುಳಿಸಿದರು.ಎರಡನೇ ಇನ್ನೀಂಗ್ಸ್ ಆರಂಭಿಸಿದ ಭಾರತಕ್ಕೆ ಆಂಗ್ಲ ಬೌಲರ್ಗಳು ಆಘಾತ ನೀಡಿದರು.
ಯಶಸ್ವಿ ಜೈಸ್ವಾಲ್(0) ಕರುಣ್ ನಾಯರ್ (14), ನಾಯಕ ಶುಭ್ಮನ್ ಗಿಲ್(6), ಆಕಾಶ್ ದೀಪ್(1) ಅವರ ವಿಕೆಟ್ ಕಳೆದುಕೊಂಡಿತು.ಮೊದಲ ಇನಿಂಗ್ಸ್ನ ಶತಕ ವೀರ ಕೆ.ಎಲ್.ರಾಹುಲ್ ಔಟಾಗದೇ (33*) ಉಳಿದಿದ್ದಾರೆ.














