ಸುಳ್ಯ:ನಮ್ಮ ಹಬ್ಬ ಹರಿದಿನಗಳ ಆಚರಣೆಯ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ. ಸಮುದಾಯದಲ್ಲಿ ಐಕ್ಯತೆ ಬೆಳೆಯಲು ಸಹಾಯಕ ಎಂದು ಖ್ಯಾತ ಚಲನಚಿತ್ರ ನಟ ಅರವಿಂದ ಬೋಳಾರ್ ಅಭಿಪ್ರಾಯಪಟ್ಟರು. ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಹಾಗೂ ವಿವಿಧ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಸೆ. 16 ರಂದು ಅಂಬೆಟಡ್ಕ ಗಿರಿದರ್ಶಿನಿ ಸಭಾ ಭವನದಲ್ಲಿ ನಡೆದ ಮೂರನೇ ವರ್ಷದ
ಓಣಂ ಆಚರಣೆಯ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಹಿಳೆಯರು ಮತ್ತು ಯುವಕರ ಪಾತ್ರ ಬಲು ದೊಡ್ಡದು ಎಂದು ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ತೀಯ ಸಮಾಜದ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ವಹಿಸಿದ್ದರು.
ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಪ್ರಸ್ತುತ ಮಂಗಳೂರು ನಗರಾ ಭಿವೃದ್ದಿ ಪ್ರಾಧಿಕಾರ (ಮೂಡಾ)ದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ , ಪ್ರೇಮಚಂದ್ , ರಾಕೇಶ್ ಕುತ್ತಮೊಟ್ಟೆ , ಸುನಿಲ್ ಕೆ ಸಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರವಿಂದ ಬೋಳಾರ್ ಹಾಗೂ ಸದಾಶಿವ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಎಎಸ್ಐ ಭಾಸ್ಕರ ಹಾಗೂ ವಿಜಯ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ
ಓಣಂ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಞಿರಾಮನ್ ಉದ್ಘಾಟಿಸಿದರು. ಬಳಿಕ ಮಕ್ಕಳು, ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆಗಳು ನಡೆಯಿತು ಬಳಿಕ ಸಾಂಸ್ಕೃತಿಕ ಸಂಭ್ರಮ ನಡೆಯಿತು.