ಮುಂಬೈ: ಭಾರತ ತಂಡ ಆತ್ಮಾಲೋಕನ ಮಾಡಿಕೊಳ್ಳಬೇಕು. ಟೆಸ್ಟ್ ಮಾದರಿಯಲ್ಲಿ ಅನಗತ್ಯ ಪ್ರಯೋಗಕ್ಕೆ ಮುಂದಾಗಬಾರದು ಮತ್ತು ಉತ್ತಮ ಪಿಚ್ಗಳಲ್ಲಿ ಆಡಲು ಮುಂದಾಗಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ತಾರೆಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.ಟಾಮ್ ಲೇಥಮ್ ಸಾರಥ್ಯದ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿಯನ್ನು 0–3 ರಿಂದ
ಶೋಚನೀಯವಾಗಿ ಸೋತ ನಂತರ ಅಭಿಮಾನಿಗಳೂ ಆಕ್ರೋಶಗೊಂಡಿದ್ದಾರೆ.ತವರಿನಲ್ಲಿ 3–0 ಸೋತಿದ್ದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆತ್ಮಾವಲೋಕನಕ್ಕೆ ಇದು ಸಕಾಲ. ಸಿದ್ಧತೆಯ ಕೊರತೆ ಕಾರಣವೇ ಅಥವಾ ಹೊಡೆತಗಳ ಆಯ್ಕೆಯಲ್ಲಿ ಎಡವಿದ್ದು ಕಾರಣವೇ?’ ಎಂದು ತೆಂಡೂಲ್ಕರ್ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದಾರೆ.
ಗಿಲ್ ಮೊದಲ ಇನಿಂಗ್ಸ್ನಲ್ಲಿ ದಿಟ್ಟವಾಗಿ ಆಡಿದರು. ಪಂತ್ ಎರಡೂ ಇನಿಂಗ್ಸ್ಗಳಲ್ಲಿ ಅಮೋಘವಾಗಿದ್ದರು. ಇಂಥ ಸವಾಲಿನ ಪಿಚ್ನಲ್ಲಿ ಅವರ ಪಾದಚಲನೆಯ ರೀತಿ ಎದ್ದುಕಂಡಿತು. ಅವರ ಆಟ ಅತ್ಯಾಕರ್ಷಕ’ ಎಂದು ತೆಂಡೂಲ್ಕರ್ ಉಲ್ಲೇಖಿಸಿದ್ದಾರೆ.
‘ಇಂಥ ವೇಳೆಯೂ ಅಭಿಮಾನಿಗಳೂ ತಂಡಕ್ಕೆ ಬೆಂಬಲ ನೀಡುವುದು ಸಹಜ. ಆದರೆ ಇದು ನಮ್ಮ ತಂಡದ ಅತಿ ಕಳಪೆ ಆಟ’ ಎಂದು ಮಾಜಿ ಆರಂಭ ಆಟಗಾರ ಸೆಹ್ವಾಗ್ ಹೇಳಿದ್ದಾರೆ.
ಸ್ಪಿನ್ ಆಡುವ ಕೌಶಲದಲ್ಲಿ ಸಾಕಷ್ಟು
ಸುಧಾರಣೆ ಕಾಣಬೇಕಾಗಿದೆ. ಏಕದಿನ, ಚುಟುಕು ಮಾದರಿಗೆ ಕೆಲವು ಪ್ರಯೋಗಗಳು ಒಳ್ಳೆಯದು. ಆದರೆ ಟೆಸ್ಟ್ನಲ್ಲಿ ಅನಗತ್ಯ ಪ್ರಯೋಗಗಳು ಒಳ್ಳೆಯದಲ್ಲ ಎದು ಹೇಳಿದ್ದಾರೆ.
‘ಇಂಥ ಪಿಚ್ಗಳಲ್ಲಿ ಯಾರು, ಯಾರನ್ನೂ ಬೇಕಾದರೂ ಔಟ್ ಮಾಡಬಹುದು. ಇಲ್ಲಿ ತಂಡಗಳಿಗೆ ವಿಕೆಟ್ ಪಡೆಯಲು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಅಥವಾ ಸಕಲೇನ್ ಮುಷ್ತಾಕ್ ಅಂಥ ದಂತಕತೆ ಬೌಲರ್ಗಳ ಅಗ್ಯ ಬೀಳುವುದಿಲ್ಲ’ ಎಂದು ಮಾಜಿ ಆಫ್ ಸ್ಪಿನ್ ಬೌಲರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.