ಪೆಲೆಕೆಲೆ: ಅತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 213 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.ಈ ಗುರಿ ತಲುಪುವಲ್ಲಿ ವಿಫಲವಾದ ಶ್ರೀಲಂಕಾ 19.2 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು
170 ರನ್ ಗಳಿಸಿ ಸೋಲುಂಡಿತು. ಈ ಮೂಲಕ ಭಾರತ ಮೊದಲ ಪಂದ್ಯದಲ್ಲಿ 43 ರನ್ಗಳ ಜಯ ದಾಖಲಿಸಿತು. ಶ್ರೀಲಂಕಾ ಪರ ಪಿ.ನಿಸ್ಸಂಕ 48 ಎಸೆತಗಳಲ್ಲಿ 79 ರನ್ ಬಾರಿಸಿದರು. ಕುಶಲ್ ಮೆಂಡಿಸ್ 27 ಎಸೆತಗಳಲ್ಲಿ 45 ರನ್ ಬಾರಿಸಿದರು. ಭಾರತದ ಪತ ರಿಯಾನ್ ಪರಾಗ್ 3, ಅಕ್ಷರ್ ಪಟೇಲ್ , ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಮಹಮ್ಮದ್ ಸಿರಾಜ್, ರವಿ ಬಿಸ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧ ಶತಕ ಸಿಡಿಸಿದರು. ಸೂರ್ಯ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹೀತ 58 ರನ್ ಬಾರಿಸಿದರು. ರಿಷಭ್ ಪಂತ್ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹೀತ 49 ರನ್, ಯಶಸ್ಬಿ ಜೈಸ್ವಾಲ್ 21 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹೀತ 40 ರನ್ ಶುಭಮನ್ ಗಿಲ್ 16 ಎಸೆತಗಳಲ್ಲಿ 6 ಬೌಂಡರಿ ಹಾಗೂ 1ಸಿಕ್ಸರ್ ಸಹೀತ 34 ರನ್ ಬಾರಿಸಿದರು.