ಸುಳ್ಯ:ಆನ್ಲೈನ್ ವ್ಯಾಪಾರದ ಭರಾಟೆಯ ಹಿಂದೆ ಹೋಗದೆ ಸ್ಥಳೀಯವಾಗಿ ಖರೀದಿಸುವ ಮೂಲಕ ಸ್ಥಳೀಯ ವ್ಯಾಪಾರಿಗಳನ್ನು ಮತ್ತು ಉದ್ಯಮಿಗಳನ್ನು ಬೆಂಬಲಿಸಬೇಕು.ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಆ ಮೂಲಕ ನಾಡಿನ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸುಳ್ಯ ರಥಬೀದಿಯ ಸ್ವಸ್ತಿಕ್ ಕಂಪ್ಯೂಟರ್ಸ್ನ ವಿಸ್ತೃತ ಮಳಿಗೆ ‘ಸ್ವಸ್ತಿಕ್ ಲ್ಯಾಪ್ಟಾಪ್’ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ
ಅತಿಥಿಗಳಾಗಿ ಭಾಗವಹಿಸಿದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.
ಸ್ವಸ್ತಿಕ್ ಕಂಪ್ಯೂಟರ್ಸ್ನ ವಿಸ್ತ್ರತ ಮಳಿಗೆ ಲ್ಯಾಪ್ಟಾಪ್ ಶೋರೂಂನ್ನು ಕಾಸರಗೋಡಿನ ಹಿರಿಯ ನ್ಯಾಯವಾದಿ ಕೆ.ಶ್ರೀಕಾಂತ್ ತ್ರಿಕ್ಕನ್ನಾಡ್ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತರಾದ ಕೃಪಾಶಂಕರ ತುದಿಯಡ್ಕ ತುದಿಯಡ್ಕ ದೀಪ ಪ್ರಜ್ವಲನೆ ಮಾಡಿದರು.ಮುಖ್ಯ ಅತಿಥಿಗಳಾಗಿ

ವರ್ತಕರ ಸಂಘದ ಗೌರವಾಧ್ಯಕ್ಷ ಸುಧಾಕರ ರೈ ನೆಟ್ಕಾಂ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು,ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಕೆ ಭಾಗವಹಿಸಿ ಶುಭ ಹಾರೈಸಿದರು. ಸಾವಿತ್ರಿ ಬೈಪಡಿತ್ತಾಯ ಅಜ್ಜಾವರ,
ಸ್ವಸ್ತಿಕ್ ಕಂಪ್ಯೂಟರ್ಸ್ನ ಮಾಲಕರದ ಕೃಷ್ಣರಾಜ್ ಬೈಪಡಿತ್ತಾಯ ಅಜ್ಜಾವರ, ಶ್ವೇತಾ ಕೃಷ್ಣರಾಜ್, ಕಿರಣರಾಜ್ ಬೈಪಡಿತ್ತಾಯ ಅಜ್ಜಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣರಾಜ್ ಬೈಪಡಿತ್ತಾಯ ಸ್ವಾಗತಿಸಿದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಹಲವಾರು ಮಂದಿ

ಗ್ರಾಹಕರು ಆಗಮಿಸಿ ಶುಭ ಹಾರೈಸಿದರು.
ಕಳೆದ ಎರಡು ದಶಕಗಳಿಂದ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವೀಸ್ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತ ಸ್ವಸ್ತಿಕ್ ಕಂಪ್ಯೂಟರ್ಸ್ ಸುಳ್ಯದ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದಿದೆ. ಸುಳ್ಯದ ಜನತೆಯ ಕಂಪ್ಯೂಟರ್, ಲ್ಯಾಪ್ಟಾಪ್,ಅಂತರ್ಜಾಲ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಪೂರೈಸಿ, ಸಮಸ್ಯೆಗಳನ್ನು ಪರಿಹರಿಸಿ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಕ್ಷೇತ್ರದಲ್ಲಿ ಸ್ವಸ್ತಿಕ್ ಸುಳ್ಯದ ಬ್ರಾಂಡ್ ಆಗಿದೆ. ನಿರಂತರ ನಗುಮುಖದ ಅತ್ಯುತ್ತಮ ಸೇವೆ ಮತ್ತು ಗುಣಮಟ್ಟದಲ್ಲಿ ರಾಜಿ ಇಲ್ಲದ ವ್ಯವಹಾರದ ಮೂಲಕ ಜನರ ಮನಗೆದ್ದ ಸ್ವಸ್ತಿಕ್ ಗ್ರೂಪ್ನ ಮೂರನೇ ಸಂಸ್ಥೆ ಸ್ವಸ್ತಿಕ್ ಲ್ಯಾಪ್ಟಾಪ್ ಶೋರೂಮ್. 2006ರಲ್ಲಿ ಸೈಬರ್ ಸೆಂಟರ್, ಕಂಪ್ಯೂಟರ್, ಮೊಬೈಲ್ ಸೇಲ್ಸ್ ಮತ್ತು ಸರ್ವೀಸ್ ಕೇಂದ್ರವಾಗಿ ಸ್ವಸ್ತಿಕ್ ಕಂಪ್ಯೂಟರ್ಸ್ ಆರಂಭಗೊಂಡಿತು. 2016ರಲ್ಲಿ ಕಂಪ್ಯೂಟರ್ ಮತ್ತು

ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸರ್ವೀಸ್ಗಾಗಿ ಪ್ರತ್ಯೇಕ ಮಳಿಗೆಯನ್ನು ತೆರೆಯಲಾಯಿತು. ಇದೀಗ ಆಕರ್ಷಕ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳ ಡಿಸ್ಪ್ಲೇ, ಸೇಲ್ಸ್ ಮತ್ತು ಸರ್ವೀಸ್ಗಾಗಿ ಲ್ಯಾಪ್ಟಾಪ್ ಶೋರೂಮ್ ಆರಂಭಗೊಳ್ಳುತಿದೆ.
ಆಕರ್ಷಕ ಆಫರ್:
ಸ್ವಸ್ತಿಕ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ
ಉದ್ದೇಶದಿಂದ ಹೊಸ ಲ್ಯಾಪ್ಟಾಪ್ ಶೋರೂಮ್ ಆರಂಭಿಸಲಾಗುತ್ತದೆ.
ಉದ್ಘಾಟನೆಯ ಪ್ರಯುಕ್ತ ಸ್ವಸ್ತಿಕ್ ಲ್ಯಾಪ್ಟಾಪ್ ಶೋರೂಮ್ನಲ್ಲಿ ಆಕರ್ಷಕ ವೈವಿಧ್ಯಮಯ ಲ್ಯಾಪ್ಟಾಪ್ಗಳ ವರ್ಣ ಲೋಕವೇ ತೆರೆದುಕೊಂಡಿದೆ.ಎಲ್ಲಾ ಕಂಪೆನಿಗಳ ಅತ್ಯಾಧುನಿಕ ಲ್ಯಾಪ್ಟಾಪ್ಗಳ ಅಪೂರ್ವ ಸಂಗ್ರಹವೇ ಬಂದಿದೆ. ಡೆಲ್, ಲೆನೊವೊ, ಹೆಚ್ಪಿ, ಆಸೆಸ್, ಏಸರ್, ಆಫಲ್ ಕಂಪೆನಿಗಳ ಲ್ಯಾಪ್ಟಾಪ್ಗಳು ಲಭ್ಯವಿರಲಿದೆ.ಗ್ರಾಹಕರು ಬಯಸುವ ಎಲ್ಲಾ ತರಹದ, ಎಲ್ಲಾ ಶ್ರೇಣಿಯ ಬ್ರಾಂಡ್ಗಳ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳು ಲಭ್ಯವಿದೆ ಉದ್ಘಾಟನೆಯ ಪ್ರಯುಕ್ತ ಸ್ವಸ್ತಿಕ್ ಲ್ಯಾಪ್ಟಾಪ್ ಶೋರೂಮ್ನಲ್ಲಿ ಆಕರ್ಷಕ ಆಫರ್ಗಳು ಲಭ್ಯವಿದೆ. ಎಲ್ಲಾ

ಬ್ರಾಂಡ್ಗಳ ಆಕರ್ಷಕ ಲ್ಯಾಪ್ಟಾಪ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಉದ್ಘಾಟನೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ಘೋಷಿಸಿದೆ.ಅಲ್ಲದೆ ಪ್ರತಿ ಲ್ಯಾಪ್ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ. ಲ್ಯಾಪ್ಟಾಪ್ ಖರೀದಿಗೆ ಆಕರ್ಷಕ ಆಫರ್ಗಳನ್ನು ನೀಡಲಾಗುವುದು.ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದ್ದು ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು
ಸದುಪಯೋಗ ಪಡಿಸಿಕೊಳ್ಳಬಹುದು.
ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ತಮ್ಮ ಇಷ್ಟದ ಲ್ಯಾಪ್ಟಾಪ್ಗಳ ಬುಕ್ಕಿಂಗ್ ಮಾಡಲು ಅವಕಾಶ ಇದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಲ್ಯಾಪ್ಟಾಪ್ ಬುಕ್ಕಿಂಗ್ ಹಾಗು ಇತರ ಮಾಹಿತಿಗಾಗಿ ಸಂಪರ್ಕಿಸಿ:
9448812233
7022445566










