ಕೊಲಂಬೊ:ಭಾರತ ಮತ್ತು ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಫಾಲೋ-ಆನ್ ಭೀತಿ ಎದುರಿಸುತಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 9 ವಿಕೆಟ್ಗೆ 503 ರನ್ಗಳನ್ನು ಗಳಿಸಿ ಡಿಕ್ಲೇರ್ ಮಾಡಿದೆ. ಮೂರನೇ ದಿನದ ಅಂತ್ಯಕ್ಕೆ ಶ್ರೀಲಂಕಾ 8 ವಿಕೆಟ್ಗೆ
265 ರನ್ ಗಳಿಸಿದೆ.ಲಹಿರು ಕುಮಾರ (8 ರನ್) ಮತ್ತು ಸೋನಾಲ್ ದಿನುಷ (85 ರನ್) ಬ್ಯಾಟಿಂಗ್ ಮಾಡುತ್ತಿದ್ದಾರೆ. ಶ್ರೀಲಂಕಾ ತಂಡ ಭಾರತದ ಸ್ಕೋರ್ಗಿಂತ ಇನ್ನೂ 238 ರನ್ಗಳ ಹಿಂದಿದೆ. ಶ್ರೀಲಂಕಾ ಫಾಲೋ-ಆನ್ ತಪ್ಪಿಸಲು ಕನಿಷ್ಠ 304 ರನ್ ಬೇಕು. ಎರಡು ವಿಕೆಟ್ಗೆ 8 ರನ್ ಗಳಿಸಿ ಆಟ ಮುಂದುವರಿಸಿದ ಶ್ರೀಲಂಕಾ ಪರ ಪಸಿಂದು ಸೂರ್ಯಬಂದಾರ 80 ರನ್ ಗಳಿಸಿದರೆ, ಕಮಿಂದು ಮೆಂಡಿಸ್ 32 ರನ್ ಗಳಿಸಿದರು. ಭಾರತದ ಪರ ಪ್ರಸಿದ್ಧ ಕೃಷ್ಣ ಹಾಗು ಮಾನವ್ ಸುತಾರ್ ತಲಾ 3 ವಿಕೆಟ್ ಪಡೆದರು.ಮಹಮ್ಮದ್ ಸಿರಾಜ್, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು.
ಶ್ರೀಲಂಕಾ ಮೇಲೆ ಫಾಲೋ ಆನ್ ಏರಿದರೆ ಭಾರತದ ಗೆಲುವು ಸುಲಭವಾಗವಹುದು. ಶ್ರೀಲಂಕಾ ಫಾಲೋ ಆನ್ ತಪ್ಪಿಸಿದರೆ ಮಳೆಯ ಅಡ್ಡಿ ಇರುವ ಕಾರಣ ಪಂದ್ಯದಲ್ಲಿ ಡ್ರಾದತ್ತ ಸಾಗಬಹುದು. ಒಟ್ಟಿನಲ್ಲಿ ನಾಲ್ಕನೇ ದಿನದಾಟ ಮಹತ್ವದ್ದಾಗಿದೆ.









