ಸುಳ್ಯ:ಸುಳ್ಯದ ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಅನಿಶ್ ನಾದ್ ಅವರು ‘ಮಹಾನ್ ವ್ಯಕ್ತಿಗಳ ಜೀವನದ ಆದರ್ಶಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ. ಕನಕದಾಸರ ಕೀರ್ತನೆಗಳು
ಕೇವಲ ಹಾಡುಗಳಲ್ಲ; ಅವು ಭಕ್ತಿ, ಜ್ಞಾನ, ಸಮಾನತೆ ಹಾಗೂ ಜೀವನ ಮೌಲ್ಯಗಳನ್ನು ಸಾರುವ ಅಮೂಲ್ಯ ಸಂದೇಶಗಳಾಗಿವೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ

ಅಂಗವಾಗಿ ವಿದ್ಯಾರ್ಥಿಗಳಿಂದ ಭಕ್ತಿಗೀತೆ, ಭಾಷಣ, ರಸಪ್ರಶ್ನೆ ಹಾಗೂ ನುಡಿಮುತ್ತುಗಳ ಪ್ರಸ್ತುತಿ ನಡೆಯಿತು. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಶರ್ವ ಮತ್ತು ಲೀಲಾಧರ್ ಕನಕದಾಸರ ಕೀರ್ತನೆಯನ್ನು ಹಾಡಿದರು. ಮಾನ್ಯ ಮತ್ತು ಶ್ರುತ್ ರಾಜ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬೃಂದಾ ಜಿ. ರಾವ್ ಅವರು ಕನಕದಾಸರ ಜೀವನ ಮತ್ತು ಸಾಧನೆಗಳ ಮಹತ್ವವನ್ನು ತಿಳಿಸಿದರು. ಸ್ವಾರಸ್ಯ ಮತ್ತು ಕರಣ್ ಅವರು ಕನಕದಾಸರ ಕುರಿತಾದ ನುಡಿಮುತ್ತುಗಳನ್ನು ಪ್ರಸ್ತುತಪಡಿಸಿದರು.ಈ ಸಂದರ್ಭದಲ್ಲಿ
ಶಾಲೆಯ ಉಪಪ್ರಾಂಶುಪಾಲರಾದ ಶಿಲ್ಪಾ ಬಿದ್ದಪ್ಪ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶಿಕ್ಷಕಿಯರಾದ ಜ್ಯೋತ್ಸ್ನಾ ಮತ್ತು ಸೌಮ್ಯ ಬಿ.ಕೆ. ಸಹಕರಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.















