ಕೊಲಂಬೊ:ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್ನ 4ನೇ ದಿನದಾಟ ಮಳೆಯಿಂದಾಗಿ ಬೇಗ ಅಂತ್ಯಗೊಂಡಿತು. ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗೆ 229 ರನ್ ಗಳಿಸಿ, ಭಾರತದ ವಿರುದ್ಧ 16 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ. ಕೇಶರ ನುವಂಥ ಮೂರು ರನ್ ಮತ್ತು ಸೋನಾಲ್ ಸೋನಾಲ್ ದಿನುಷಾ ಏಳು ರನ್ ಬಾರಿಸಿ ಅಜೇಯರಾಗಿಉಳಿದಿದ್ದು, ಐದನೇ ದಿನದಾಟಕ್ಕೆ
ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಮಾನವ್ ಸುತಾರ್ 2 ವಿಕೆಟ್ ಪಡೆದರು.ನಾಲ್ಕನೇ ದಿನದಂದು ಶ್ರೀಲಂಕಾದ ಮೊದಲ ಇನ್ನಿಂಗ್ಸ್ನಲ್ಲಿ ಸೋನಲ್ ದಿನುಷಾ ತಮ್ಮ ಸರಣಿಯ ಸತತ ಎರಡನೇ ಶತಕ ಬಾರಿಸುವುದರೊಂದಿಗೆ ದಿನ ಆರಂಭವಾಯಿತು. ಆದಾಗ್ಯೂ, ಶ್ರೀಲಂಕಾ 4ನೇ ದಿನದಂದು ತನ್ನ ಒಟ್ಟು ಮೊತ್ತಕ್ಕೆ ಕೇವಲ 22 ರನ್ ಸೇರಿಸಿ 290 ರನ್ಗೆ ಆಲ್ ಔಟ್ ಆಯಿತು. ಆಫ್-ಸ್ಪಿನ್ನರ್ ಸರಾಂಶ್ ಜೈನ್ ಕೊನೆಯ ಎರಡು ವಿಕೆಟ್ಗಳನ್ನು ಪಡೆದು ಲಂಕಾ ಇನ್ನಿಂಗ್ಸ್ ಅಂತ್ಯ ಹಾಡಿದರು. ಹೀಗಾಗಿ ಶ್ರೀಲಂಕಾ ತಂಡಕ್ಕೆ ಫಾಲೋ-ಆನ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಆದ್ದರಿಂದ
ನಾಯಕ ಶುಭ್ಮನ್ ಗಿಲ್ ಶ್ರೀಲಂಕಾ ತಂಡದ ಮೇಲೆ ಫಾಲೋ-ಆನ್ ಹೇರಿದರು. ಹೀಗಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಪರ ಪಸಿಂದು ಸೂರ್ಯಬಂಡಾರ ಸತತ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಮೊದಲ ಇನ್ನಿಂಗ್ಸ್ನಲ್ಲಿ 80 ರನ್ಗಳಿಗೆ ಔಟಾಗಿದ್ದ ಪಸಿಂದು ಎರಡನೇ ಇನ್ನಿಂಗ್ಸ್ನಲ್ಲಿ 92 ರನ್ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು.
ಕಮಿಂದು ಮೆಂಡಿಸ್ ಸರಣಿಯ ಮೊದಲ ಅರ್ಧಶತಕ(55) ಬಾರಿಸಿ ತಂಡವನ್ನು 200 ರನ್ಗಳ ಗಡಿ ದಾಟಿಸಿ ಔಟಾದರು. ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದೆಯಾದರೂ ಅಂತಿಮ ದಿನದಂದು ಹವಾಮಾನ ಹೇಗಿರುತ್ತದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.









