ಸುಳ್ಯ:ಸುಳ್ಯದ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸ ಮಳಿಗೆ ‘ಸ್ವರ್ಣಂ ಜುವೆಲ್ಸ್’ ಜುಲೈ 7ರಂದು ಸುಳ್ಯದಲ್ಲಿ ಶುಭಾರಂಭಗೊಂಡಿತು. ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸುಂತೋಡು ಎಂಪೋರಿಯಂನಲ್ಲಿ ನೂತನ ಚಿನ್ನಾಭರಣಗಳ ಮಳಿಗೆ ಕಾರ್ಯಾರಂಭ ಮಾಡಿತು. ಮುಳಿಯ ಗೋಲ್ಡ್ & ಡೈಮಂಡ್ಸ್ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ ಅವರು ಹೊಸ ಮಳಿಗೆಯನ್ನು
ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಅವರು ಡೈಮಂಡ್ ಕೌಂಟರ್ ಅನ್ನು ಉದ್ಘಾಟಿಸಿದರು. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಿದರು. ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಶ್ರಮಿಕಾ ಸುಂತೋಡು ಅವರು ಸ್ವರ್ಣಂ ಸ್ಪೆಷಲ್ ಆಭರಣಗಳನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಸುಳ್ಯದ

ವಾಣೀಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಡಾ.ರೇವಂತ್ ಅತಿಥಿಗಳಾಗಿದ್ದರು. ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ.ಕೆ, ಭವಿತ್.ಯು, ಹಾಗೂ ಲೋಕೇಶ್ ಎಂ.ಎಸ್,
ಅಶ್ವಿನಿ,ಷಡಾಕ್ಷರಿ, ಗೀತಾ, ಸ್ವಾತಿ ಉಪಸ್ಥಿತರಿದ್ದರು. ಪಾಲುದಾರರಾದ ಸಂಜೀವ.ಕೆ ಸ್ವಾಗತಿಸಿ, ಪ್ರವೀಣ್.ಬಿ.ಗೌಡ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
ಶುಭಾರಂಭ ಪ್ರಯುಕ್ತ ವಿಶೇಷ ಕೊಡುಗೆ:
ಸುಳ್ಯ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಸ್ವರ್ಣಂ ಜ್ಯುವೆಲ್ಸ್ ಶುಭಾರಂಭಗೊಂಡಿದೆ.
ಗ್ರಾಹಕರ ಸೇವೆಯಲ್ಲಿ, ಚಿನ್ನೋದ್ಯಮದಲ್ಲಿ 20 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರರೊಂದಿಗೆ ಕಾರ್ಯಾರಂಭ ಮಾಡಿರುವ ಸ್ವರ್ಣಂ ಜ್ಯುವೆಲ್ಸ್ನಲ್ಲಿ
ಉದ್ಘಾಟನೆ ಪ್ರಯುಕ್ತ ವಿಶೇಷ ಆಫರ್, ಕೊಡುಗೆ ನೀಡುತಿದೆ.

ಸ್ವರ್ಣಂ ವಿಶೇಷತೆ:
ನಗು ಮೊಗದ ಸರ್ವಿಸ್, ಆರ್ಡರ್ ಸ್ಪೆಷಲಿಸ್ಟ್, ಗೋಲ್ಡ್ ಟೆಸ್ಟ್ ಮೆಶಿನ್, ಉಚಿತ ಆಭರಣ ಸರ್ವಿಸ್, ಡೋರ್ ಡೆಲಿವರಿ. ನಾವು ತುರ್ತು ಸಮಯದಲ್ಲಿ ಗ್ರಾಹಕರ ಮನಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡಲಾಗುತ್ತವೆ.
ಎಂದು ಮಾಲಕರು ತಿಳಿಸಿದ್ದಾರೆ.

12,000 ರೂ.ಗೆ ಚಿನ್ನದ ನೆಕ್ಲೇಸ್ಗಳು:
ಮಹಿಳೆಯರಿಗೆ ಮನಕ್ಕೆ ಇಚ್ಚಿಸುವಂತಹ ನೂತನ ಶೈಲಿಯ 15 ಕ್ಕೂ ಹೆಚ್ಚು ಕಲರ್ ಮ್ಯಾಚಿಂಗ್ ಚಿನ್ನದ ನೆಕ್ಲೇಗಳು ಇದೀಗ ಸ್ವರ್ಣಂ ಜ್ಯುವೆಲ್ಸ್ನಲ್ಲಿ ಲಭ್ಯವಿದೆ.12000 ರೂ.ಒಳಗೆ ಖರೀದಿಸಬಹಿದು.
ಪ್ರತೀ ಖರೀದಿಗೂ ವಿಶೇಷ ಉಡುಗೊರೆ : ಚಿನ್ನ, ಬೆಳ್ಳಿ, ವಜ್ರ ಖರೀದಿಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ಕೊಡಲಾಗುವುದು. ಗ್ರಾಹಕರು ನೂತನ ಮಳಿಗೆಗೆ ಭೇಟಿ ನೀಡಿ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹವನ್ನು ವೀಕ್ಷಿಸಬೇಕಾಗಿ ಸ್ವರ್ಣಂ ಜ್ಯುವೆಲ್ಸ್ ಆಡಳಿತ ಪಾಲುದಾರರು ಪ್ರವೀಣ್ ಗೌಡ . ಬಿ, ಸಂಜೀವ ಕೆ, ಭವಿತ್ ಯು, ಲೋಕೇಶ್ ಎಂ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಕ್ಕಿಂಗ್ ಹಾಗೂ ವಿಶೇಷ ವಾಹನ ಪಾರ್ಕಿಂಗ್ಗೆ ಕರೆ ಮಾಡಬಹುದು. 7975425067.















