ಪಂಜ : ಪಂಜದ ಬಿಡಾರಕಟ್ಟೆ ಭುವನೇಂದ್ರ ಗೌಡರ ಪುತ್ರ ರಕ್ಷಿತ್ ಬಿಡಾರಕಟ್ಟೆ ಯವರು ಪಿ. ಯು. ಸಿ. ಯಲ್ಲಿ ಶೇ.95ಅಂಕಗಳನ್ನು ಗಳಿಸಿ ಇದೀಗ ನೀಟ್ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದು ಸರಕಾರಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಸನ್ಮಾನಿಸಿ ಗೌರವಿಸಿದರು.














