ಸುಳ್ಯ:ಸುಳ್ಯದಲ್ಲಿ ಪ್ರಥಮ ಬಾರಿಗೆ ಸ್ವದೇಶಿ ಆಹಾರ ಮೇಳ ಅ.2ರಂದು ಉದ್ಘಾಟನೆಗೊಂಡಿತು. ಅ.4ರ ತನಕ 3 ದಿನಗಳ ಕಾಲ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಮೇಳ ನಡೆಯಲಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ನ.ಸೀತಾರಾಮ ಮೇಳವನ್ನು
ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕಿ ಭಾಗೀರಥಿ ಮುರುಳ್ಯ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ನಿಕೇಶ್ ಉಬರಡ್ಕ, ನ.ಪಂ.ಮಾಜಿ ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ಶಿಲ್ಪಾ ಸುದೇವ್, ಸುಧಾಕರ ಕುರುಂಜಿಗುಡ್ಡೆ, ಶಕ್ತಿ ಇವೆಂಟ್ಸ್ನ ಗುರುಪ್ರಸಾದ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.ಶಾಸಕಿ

ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಶಕ್ತಿ ಈವೆಂಟ್ಸ್ ಆಶ್ರಯದಲ್ಲಿ ಪ್ರಥಮ ಬಾರಿಗೆ ಸುಳ್ಯದಲ್ಲಿ ಸ್ವದೇಶಿ ಆಹಾರ ಮೇಳ ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಸ್ವದೇಶಿ ಆಹಾರ ಮೇಳದ ಮಳಿಗೆಯಲ್ಲಿ ವಿವಿಧ ತಿಂಡಿ ತಿನಿಸುಗಳು, ಖಾದಿ ಬಟ್ಟೆಗಳ ಮಳಿಗೆ, ಮಸಾಲ ಪದಾರ್ಥಗಳ ಮಳಿಗೆ, ಕರಕುಶಲ ಮಳಿಗೆ, ಗೃಹ ಉಪಯೋಗಿ ವಸ್ತುಗಳ ಮಳಿಗೆಗಳು ಇರಲಿದೆ.ಅಲ್ಲದೆ

ಕೈಮಗ್ಗ, ತೆಂಗಿನ ಎಣ್ಣೆ, ಆಯುರ್ವೇದ ಔಷಧಿಗಳು, ತಾಳೆ ಬೆಲ್ಲ, ಹೋಳಿಗೆ (ಅನಾನಸು, ಖರ್ಜೂರ ), ಜಿಲೇಬಿ, ಬೋಂಡಾ, ಐಸ್ಕ್ರೀಮ್ಗಳು, ಮಣ್ಣಿನ ಪಾತ್ರೆಗಳು, ಉಪ್ಪಿನ ಕಾಯಿ, ಸೆಂಡಿಗೆ, ವಿವಿಧ ತಳಿಯ ಹೂ, ಹಣ್ಣುಗಳ ಗಿಡಗಳು,ತರಕಾರಿ ಬೀಜಗಳು ಸೇರಿ ವೈವಿಧ್ಯ ವಸ್ತುಗಳು, ಆಹಾರ ವಸ್ತುಗಳು ಮೇಳದಲ್ಲಿ ಇದೆ. ಹೋಳಿಗೆ, ಜಿಲೇಬಿ, ಚಿಪ್ಸ್ ಸೇರಿ ವಿವಿಧ ತಿಂಡಿ ತಿನಿಸುಗಳು ಗ್ರಾಹಕರನ್ನು ಕೈಬೀಸಿ ಕರೆಯುತಿದೆ.










