ಸುಳ್ಯ:ಸುಳ್ಯದ ಗಾಂಧಿ ಚಿಂತನ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ನಡಿಗೆ ಹಾಗೂ ಗಾಂಧಿ ಚಿಂತನ ಕಾರ್ಯಕ್ರಮ ನಡೆಯಿತು.ಗಾಂಧಿನಗರದ ಮಹಾತ್ಮ ಗಾಂಧೀ ಪ್ರತಿಮೆಯ ಬಳಿಯಿಂದ ರಂಗಮಯೂರಿ ಕಲಾ ಶಾಲೆಯ ತನಕ
ಗಾಂಧಿ ನಡಿಗೆ ನಡೆಯಿತು. ಮಾಜಿ ಪುರಸಭಾ ಸದಸ್ಯ ಕಂಜಳ ನಾವೂರು ಗಾಂಧಿ ನಡಿಗೆಗೆ ಚಾಲನೆ ನೀಡಿದರು.ಬಳಿಕ ರಂಗಮಯೂರಿ ಕಲಾ ಶಾಲೆಯಲ್ಲಿ ಗಾಂಧಿ ಚಿಂತನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಹಿರಿಯ ಪತ್ರಕರ್ತ ಡಾ.ಯು.ಪಿ.ಶಿವಾನಂದ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಲಾಯಿತು.ಹಿರಿಯ ಸಹಕಾರಿ ಕೆ.ಸೀತಾರಾಮ ರೈ ಸವಣೂರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯ ಸ್ಥಾಪಕ ಸಂಚಾಲಕ ಡಾ.ಸುಂದರ ಕೇನಾಜೆ ಗಾಂಧಿ ಚಿಂತನ ನಡೆಸಿಕೊಟ್ಟರು. ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಮಾಜಿ ಪುರಸಭಾ ಸದಸ್ಯ ಕಂಜಳ ನಾವೂರು ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್, ಸಂಚಾಲಕರಾದ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಶರೀಫ್ ಕಂಠಿ,ಚಂದ್ರಾವತಿ ಬಡ್ಡಡ್ಕ, ದುರ್ಗಾಕುಮಾರ್ ನಾಯರ್ಕೆರೆ , ಕೆ.ಆರ್.ಗೋಪಾಲಕೃಷ್ಣ ಉಪಸ್ಥಿತರಿದ್ದರು.









