ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ನವರ ಸಾರಿ ಮೇಳ ಮತ್ತೆ ಸುಳ್ಯದಲ್ಲಿ ಆರಂಭಗೊಂಡಿದೆ. ಅ.2ರಿಂದ 4ರ ತನಕ ಮೂರು ದಿನಗಳ ಕಾಲ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತಿದೆ.ಮೊದಲ
ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಪ್ರದರ್ಶನ ಮತ್ತು ಮಾರಾಟ ನಡೆಯುತಿದೆ. ಅಪೂರ್ವ ಸಾರಿಗಳ ವರ್ಣ ಲೋಕ ತೆರೆದುಕೊಂಡಿದ್ದು ಸಾವಿರಾರು
ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯುತಿದೆ. ಆಕರ್ಷಕ ಡಿಸ್ಕೌಂಟ್ ಸೇಲ್ ನಡೆಯಲಿದ್ದು ಡಿಸ್ಕೌಂಟ್ ಸಾರಿಗಳ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಅತ್ಯುತ್ತಮ ಗುಣಮಟ್ಟದ

ಬ್ರಾಂಡೆಡ್ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್, ಸೆಲ್ವಾರ್ ಮೇಟೀರಿಯಲ್ಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಲಭ್ಯವಿದೆ. ಸುಳ್ಯದ ಸಾರಿ ಪ್ರಿಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಈ ಹಿಂದೆ ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ ಸಾರೀಸ್ ಪ್ರದರ್ಶನ ಮತ್ತು
ಮಾರಾಟ ನಡೆದ ಸಂದರ್ಭದಲ್ಲಿ ಸುಳ್ಯದ ಜನತೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಮತ್ತೆ 3 ದಿನಗಳ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮತ್ತೆ ತಡವೇಕೆ ಸುಂದರ ಸೀರೆಗಳ ವರ್ಣಮಯ ಸಾರಿ ಲೋಕವನ್ನು ಕಣ್ತುಂಬಿಕೊಂಡು, ಖರೀದಿಸಿ ಆನಂದಿಸಲು.. ಲಯನ್ಸ್ ಸೇವಾ ಸದನ ಕೈಬೀಸಿ ಕರೆಯುತಿದೆ.










