ಸಂಪಾಜೆ: ಭಾರತದ ಸಂವಿಧಾನ ದಿನದ ಅಂಗವಾಗಿ ನವೆಂಬರ್ 26ರಂದು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪೆಲ್ತಡ್ಕದಿಂದ ಸಂಪಾಜೆವರೆಗೆ ನಡೆದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ವಿವಿಧ
ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಧಾರ್ಮಿಕ, ಸಾಮಾಜಿಕ ಮುಖಂಡರು, ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಸಿಬ್ಬಂದಿ ಮತ್ತು ಸಾರ್ವಜನಿಕರು ಪಾಲ್ಗೊಂಡರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಗ್ರಾಮದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ನಹೀಂ ಫೈಝಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ
ಜಿ.ಕೆ. ಹಮೀದ್ ಗೂನಡ್ಕ, ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಮಾಜಿ ಉಪಾಧ್ಯಕ್ಷ ಎಸ್.ಕೆ. ಹನೀಫ್, ಮಾಜಿ ಸದಸ್ಯರಾದ ನಾಗೇಶ್ ಪಿ.ಆರ್., ವಿಮಲ ಪ್ರಸಾದ್, ಅನುಪಮ, ರಜನಿ ಶರತ್, ಕೃಷಿ ಸಖಿ ಮೋಹಿನಿ ಸಂಪಾಜೆ (ನಿಶಾ), ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಪಿ.ಕೆ. ಉಮ್ಮರ್, ಕಾರ್ಯದರ್ಶಿ ಉಸ್ಮಾನ್ ಗೂನಡ್ಕ, ಕಲ್ಲುಗುಂಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ.ಸಿ. ಕಲ್ಲುಗುಂಡಿ ಸೊಸೈಟಿಯ ವ್ಯವಸ್ಥಾಪಕ ವೀರೇಂದ್ರ ಜೈನ್, ಅಬೂಬಕ್ಕರ್, ಕಿಶೋರ್ ಬಿ ಎಸ್, ಉಮೇಶ್ ಕನ್ಪಿಲ, ಸಾಜಿದ್ ಅಜ್ಹರಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮುಸ್ತಫಾ ಪಾಂಡಿ, ಸಾಧುಮೋನ್, ತಾಜ್ ಟರ್ಲಿ, ಶರತ್ ಕಿಲಾರ್, ಯಶೋಧರ, ಸುಧಾಕರ್, ರತ್ನಾವತಿ, ಸಂತೋಷ್ ಕ್ರಾಸ್ತಾ, ಟಿ.ಐ. ಲುಕಾಸ್, ಕುರಿಯಕೋಸ್,ಅಂಗನವಾಡಿ ಕಾರ್ಯಕರ್ತೆಯರಾದ
ಧರ್ಮಕಲಾ, ಪುಷ್ಪಾವತಿ, ಪುಷ್ಪ, ಕಾರ್ಯಕರ್ತೆ ಆಶಾ ಕಾರ್ಯಕರ್ತೆ ವಿನಯಕುಮಾರ್, ಹರ್ಷಿತಾ, ಕೃಷ್ಣವೇಣಿ, ಮಮ್ತಾಜ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್, ಸಂಜೀವಿನಿ ಒಕ್ಕೂಟದ ಕಾಂತಿ, ಭಾರತಿ, ಯಶೋಧ, ಶಾರದಾ ಶಾಲೆಯ ಹನುಮಂತ ಮಾಸ್ಟರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ಕಲ್ಲುಗುಂಡಿ ಸರ್ಕಾರಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ವಿವಿಧ ಶಾಲಾ ಮುಖ್ಯಸ್ಥರು, ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.















