ಸುಳ್ಯ:ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ 55ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಅ.16 ರಿಂದ 24ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ತಿಳಿಸಿದರು. ಅವರು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವೈಧಿಕ,ಧಾರ್ಮಿಕ ಹಾಗು
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾವು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಅ.16 ರಂದು ಮುಂಜಾನೆ ಗಣಪತಿ ಹವನದೊಂದಿಗೆ ಪ್ರಾರಂಭಗೊಂಡು ಬೆಳಗ್ಗೆ 9ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು 11:02 ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ಎರಡನೇ ದಿನದಂದು ಮಧ್ಯಾಹ್ನ ಮಹಾಪೂಜೆ ಸಂಜೆ 6ರಿಂದ ಭಜನೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈಭವ ನಡೆಯಲಿದೆ ಅ.18 ರಂದು ಮಕ್ಕಳ ದಸರಾ, ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅ.19 ರಂದು ಮಹಿಳಾ ದಸರಾ , ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅ.20 ರಂದು ಆಯುಧ ಪೂಜೆ ಬಳಿಕ ಸಂಜೆ ಭಜನೆ, ನೆನಪು ನಿನಾದ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ. ಅ.21ರಂದು ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ಭಜನೆ, ಡ್ಯಾನ್ಸ್ ಡ್ಯಾನ್ಸ್, ಡಾನ್ಸ್ ಕಾರ್ಯಕ್ರಮ, ಅ.22 ರಂದು ಸಂಜೆ 7ರಿಂದ ಸಾರ್ವಜನಿಕ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ. ಜೊತೆಗೆ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ ಅ.23 ರಂದು

ಖ್ಯಾತ ಹಿನ್ನಲೆ ಗಾಯಕಿ ಅಖಿಲ ಪಜಿಮಣ್ಣು ,ಗಣೇಶ್ ಕಾರಂತ್ ,ಅಮಿಶ್, ವೈಷ್ಣವಿ ಕಿಣಿ ಹಾಗೂ ರೇಡಿಯೋ ಜಾಕಿ ಆರ್ ಜೆ ಅನುರಾಗ್ ನಿರೂಪಣೆಯೊಂದಿಗೆ ಮ್ಯೂಸಿಕ್ ಹಂಗಾಮದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು. ಅ.24ದು ಸುಳ್ಯ ದಸರಾದ ಶ್ರೀ ಶಾರದೆಯ ವೈಭವದ ಶೋಭಾಯಾತ್ರೆಯೊಂದಿಗೆ
ದಸರಾ ಸಂಪನ್ನಗೊಳ್ಳಲಿದೆ.ವಿಶೇಷ ಅಲಂಕಾರ, ವಿದ್ಯುತ್ ದೀಪಗಳದ ಅಲಂಕೃತಗೊಂಡ ಶ್ರೀ ದೇವಿಯ ಶೋಭಾಯಾತ್ರೆಯು ಚೆಂಡೆ, ವಾದ್ಯ ಘೋಷ, ಆಕರ್ಷಕ ಸ್ಥಬ್ದ ಚಿತ್ರಗಳೊಂದಿಗೆ ಸುಳ್ಯ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.
ದಸರಾ ಉತ್ಸವಕ್ಕೆ ಸರಕಾರದಿಂದ ಅನುದಾನವನ್ನುನಿರೀಕ್ಷಿಸುತ್ತೇವೆ. 2009ರಲ್ಲಿ ಮಾತ್ರ 5 ಲಕ್ಷ ಅನುದಾನ ಬಂದಿತ್ತು. ಆ ಬಳಿಕ ಈವರೆಗೆ ಬೇರೆ ಯಾವುದೇ ಸರಕಾರಿ ಅನುದಾನ ಸಿಕ್ಕಿಲ್ಲ ಎಂದು ಎಂದು ನಾರಾಯಣ ಕೇಕಡ್ಕ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಾರದಾಂಬ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ಎನ್. ಜಯಪ್ರಕಾಶ್ ರೈ ,ಎನ್.ಎ. ರಾಮಚಂದ್ರ, ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್ , ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ ಕೋಶಾಧಿಕಾರಿ ಅಶೋಕ್ ಪ್ರಭು, ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕೇರ್ಪಳ, ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ , ಕೋಶಾಧಿಕಾರಿ ಬೆಳ್ಯಪ್ಪ ಗೌಡ ಬಳ್ಳಡ್ಕ , ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಎಂ.ಕೆ.ಸತೀಶ್, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಯಶೋಧಾ ರಾಮಚಂದ್ರ,ಅಧ್ಯಕ್ಷೆ ಲತಾ ಮಧುಸೂದನ್ , ಮತ್ತಿತರರು ಉಪಸ್ಥಿತರಿದ್ದರು.







