ಸುಳ್ಯ: ಸುಳ್ಯಕ್ಕೆ ಹೊಸತಾಗಿ ಜಾರಿಯಾದ ನಗರ ಯೋಜನಾ ಪ್ರಾಧಿಕಾರ(ಸೂಡ)ದ ವತಿಯಿಂದ ನಗರ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಗರ ಪಂಚಾಯತ್ ಸಭಾಂಗಣದಲ್ಲಿ ಜೂ.24ರಂದು ನಡೆಯಿತು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ನಗರದಲ್ಲಿ ಮಹಾ ಯೋಜನೆ(ಮಾಸ್ಟರ್ ಪ್ಲಾನ್) ಅನುಷ್ಠಾನದ ಕುರಿತು
ಚರ್ಚೆ ನಡೆಯಿತು. ಜನರಿಗೆ ಅನುಕೂಲ ಅಗುವ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರ ಕೆಲಸ ಮಾಡಲಿದೆ, ಸುಳ್ಯ ನಗರಕ್ಕೆ ಸೂಕ್ತವಾಗುವ ಮತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಾ ಯೋಜನೆ ಆಗಬೇಕು ಎಂಬ ಉದ್ದೇಶ ಇದೆ. ಮಹಾಯೋಜನೆ ಆದಷ್ಟು ಬೇಗ ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಹಾ ಯೋಜನೆಯ ಕರಡು ಪ್ರತಿಯನ್ನು ಪರಿಷ್ಕರಣೆ ಮಾಡಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಕೆ.ಎಂ.ಮುಸ್ತಫ ಹೇಳಿದರು.ಈ ಕುರಿತು

ಚರ್ಚೆ ನಡೆಯಿತು. ಮೊದಲ ಹಂತದಲ್ಲಿ ಸುಳ್ಯ ನಗರದಲ್ಲಿ ಹಾಲಿ ಇರುವ ರಸ್ತೆಗಳ ಸರ್ವೆ ನಡೆಸಿ, ಗುರುತು ಮಾಡಿ ಅವುಗಳಿಗೆ ಐಡಿ ಸಂಖ್ಯೆ ನೀಡಿ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ ನೀಡಿ ಹಾಲಿ ಇರುವ ಈ ಎಲ್ಲಾ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲಾಗುವುದು. ಎರಡನೇ ಹಂತದಲ್ಲಿ ಮಹಾ ಯೋಜನೆ ಅನುಷ್ಠಾನದ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ಸೂಕ್ತವಾಗುವ ನಿಟ್ಟಿನಲ್ಲಿ
ಪರಿಷ್ಕರಣೆ ಮಾಡಿ ನಗರದ ರಸ್ತೆಗಳ ಅಗಲವನ್ನು 12 ಮೀಟರ್ 9 ಮೀಟರ್, 6 ಮೀಟರ್ ಎಂದು ಪರಿಷ್ಕರಿಸಲಾಗುವುದು ಎಂದು ಕೆ.ಎಂ. ಮುಸ್ತಫ ಹೇಳಿದರು. ಈ ಕುರಿತು ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷರಾದ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್,
ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಬಾಲಕೃಷ್ಣ ರೈ, ಧೀರಾ ಕ್ರಾಸ್ತಾ, ಸುಧಾಕರ ಕುರುಂಜಿಗುಡ್ಡೆ, ರಿಯಾಝ್ ಕಟ್ಟೆಕ್ಕಾರ್, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಶೀಲಾ ಅರುಣ ಕುರುಂಜಿ, ಸುಶೀಲ ಜಿನ್ನಪ್ಪ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಭಾಗದ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ
ಕರಾವಳಿ ವಲಯಕ್ಕೆ ಪ್ರತ್ಯೇಕ ನಿಯಮಾವಳಿ ಮಾಡಬೇಕು ಎಂದು ದ.ಕ., ಉಡುಪಿ ಪ್ರಾಧಿಕಾರದ ಒಕ್ಕೂಟದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಸ್ತಫ ತಿಳಿಸಿದರು. ಮಹಾ ಯೋಜನೆ ಅನುಷ್ಠಾನದ ಕುರಿತು ವಿವಿಧ ಸಂಘ ಸಂಸ್ಥೆಗಳು ಹಾಗು ಪ್ರಮುಖರ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಮುಸ್ತಫ ಹೇಳಿದರು.
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್, ನಗರ ಯೋಜಕರಾದ ಫೈರೋಜ್ ಮತ್ತಿತರರು ಉಪಸ್ಥಿತರಿದ್ದರು.