ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲೂ ಭಾರತ 110 ರನ್ ಅಂತರದ ಸೋಲು ಕಂಡಿದೆ.
ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಪಂದ್ಯ ‘ಟೈ’ ಆಗಿತ್ತು.ಇದರೊಂದಿಗೆ 27 ವರ್ಷಗಳಲ್ಲಿ ಮೊದಲ ಬಾರಿ ಶ್ರೀಲಂಕಾ ವಿರುದ್ಧ
ಭಾರತ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.
249 ರನ್ಗಳ ಗುರಿ ಬೆನ್ನಟ್ಟಿದ ಭಾರತ 26.1 ಓವರ್ಗಳಲ್ಲಿ ರನ್ಗಳಿಗೆ 138 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಶ್ರೀಲಂಕಾದ ಸ್ಪಿನ್ ಸವಾಲನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್ಗಳು ವೈಫಲ್ಯರಾದರು.ನಾಯಕ ರೋಹಿತ್ ಶರ್ಮಾ ಗರಿಷ್ಠ 35 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ (30), ವಿರಾಟ್ ಕೊಹ್ಲಿ (20), ಶುಭಮನ್ ಗಿಲ್ (6), ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಅಕ್ಷರ್ ಪಟೇಲ್ (2), ರಿಯಾನ್ ಪರಾಗ್ (15), ಶಿವಂ ದುಬೆ (9) ವೈಫಲ್ಯ ಅನುಭವಿಸಿದರು.ಶ್ರೀಲಂಕಾದ ಪರ ದುನಿತ್ ವೆಲ್ಲಾಳಗೆ 27 ರನ್ಗೆ ಐದು ವಿಕೆಟ್ ಕಿತ್ತು ಮಿಂಚಿದರು.
1997ರಲ್ಲಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ಕೈಲಿ, ಭಾರತ ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯನ್ನು 0–3 ರಿಂದ ಸೋತಿತ್ತು.ಈ ಮೊದಲು ಅವಿಷ್ಕ ಫೆರ್ನಾಂಡೊ (96) ಹಾಗೂ ಕುಸಾಲ್ ಮೆಂಡಿಸ್ (59) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 248 ರನ್ಗಳ ಸವಾಲಿನ ಮೊತ್ತ ಪೇರಿಸಿತು.ಭಾರತದ ಪರ ಚೊಚ್ಚಲ ಪಂದ್ಯ ಆಡಿದ ರಿಯಾನ್ ಪರಾಗ್ ಮೂರು ವಿಕೆಟ್ ಗಳಿಸಿದರು.