ಚೆನ್ನೈ:ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಫೈನಲ್ ಪ್ರವೇಶಿಸಿತು. 26ರಂದು ನಡೆಯುವ ಫೈನಲ್ನಲ್ಲಿ ಸನ್ ರೈಸರ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್ಗಳಿಂದ ಮಣಿಸಿ ಹೈದರಾಬಾದ್ ಫೈನಲ್ ಪ್ರವೇಶಿಸಿತು. ಟಾಸ್ ಗೆದ್ದ
ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ರಾಜಸ್ಥಾನ ಪರ ಧ್ರುವ್ ಜೆರೆಲ್ 35 ಎಸೆತಗಳಲ್ಲಿ 56 ರನ್ ಹಾಗೂ ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 42 ರನ್ ಬಾರಿಸಿದರು. ಹೈದ್ರಾಬಾದ್ ಪರ ಶಹಬ್ಬಾಸ್ ಅಹಮ್ಮದ್ 3, ಅಭಿಷೇಕ್ ಶರ್ಮ 2 ವಿಕೆಟ್ ಪಡೆದರು. ಹೈದರಾಬಾದ್ ಪರ ರಾಹುಲ್ ತ್ರಿಪಾಠಿ 37, ಟ್ರಾವಿಸ್ ಹೆಡ್ 34, ಹೆನ್ರಿಚ್ ಕ್ಲಾಸಿನ್ 50 ರನ್ ಹೊಡೆದು ಗಮನ ಸೆಳೆದರು. ರಾಜಸ್ಥಾನ ಪರ ಬೌಲ್ಟ್, ಅವೇಶ್ ಖಾನ್ ತಲಾ 3 ವಿಕೆಟ್ ಪಡೆದರು.