ಹೈದರಾಬಾದ್: ಕೊನೆಯ ಎಸೆತದವರೆಗೆ ಬೆಳೆದ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಒತ್ತಡವನ್ನು ಮೆಟ್ಟಿನಿಂತು 1 ರನ್ನಿಂದ ರಾಜಸ್ಥಾನ ರಾಯಲ್ ವಿರುದ್ಧ ಗೆಲುವು ಸಾಧಿಸಿತು. ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ
ಟ್ರಾವಿಸ್ ಹೆಡ್ (58; 44 ಎ, 4×6, 6×3) ಮತ್ತು ನಿತೀಶ್ ಕುಮಾರ್ ರೆಡ್ಡಿ (ಔಟಾಗದೇ 76; 42 ಎ, 4×3, 6×8) ಅವರ ಅರ್ಧ ಶತಕಗಳ ನೆರವಿನಿಂದ ಸನ್ರೈಸರ್ಸ್ ಮೂರು ವಿಕೆಟ್ಗೆ 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 7 ವಿಕೆಟ್ಗೆ 200 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ (67; 40ಎ, 4×7, 6×2) ಮತ್ತು ರಿಯಾನ್ ಪರಾಗ್ (77; 49ಎ, 4×8, 6×4) ಮೂರನೇ ವಿಕೆಟ್ ಜೊತೆಯಾಟದಲ್ಲಿ 134 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು.
ಆದರೆ ಅವರಿಬ್ಬರು ನಿರ್ಗಮಿಸಿದ ಬಳಿಕ ಮತ್ತೆ ಸನ್ರೈಸರ್ಸ್ ಬೌಲರ್ಗಳು ಮತ್ತೆ ಹಿಡಿತ ಸಾಧಿಸಿದರು. ಶಿಮ್ರಾನ್ ಹೆಟ್ಮೆಯರ್ (13) ಮತ್ತು ಧ್ರುವ್ ಜುರೇಲ್ (1) ನಿರಾಸೆ ಮೂಡಿಸಿದರು. ಆದರೆ, ರೋವ್ಮನ್ ಪೊವೆಲ್ (ಔಟಾ ಗದೇ 27; 15ಎ) ಕೊನೆಯಲ್ಲಿ ಹೋರಾ ಟ ನಡೆಸಿದರೂ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ.ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರೆ, ಕಮಿನ್ಸ್ ಮತ್ತು ಟಿ. ನಟರಾಜನ್ ತಲಾ ಎರಡು ವಿಕೆಟ್ ಪಡೆದರು.
ಎಸ್ಆರ್ ಎಚ್ ಆಡಿರುವ 10 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. 10 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಸೋತಿರುವ ರಾಜಸ್ಥಾನ ತಂಡವು 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.