ಹೈದರಾಬಾದ್: ಐಪಿಎಲ್ನಲ್ಲಿ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು.
ಟಾಸ್ ಗೆದ್ದ ರಾಜಸ್ಥಾನ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್ ಆಯ್ದುಕೊಂಡರು. ಸನ್ ರೈಸರ್ಸ್ ಮೊದಲು ಬ್ಯಾಟ್ ಮಾಡಿತು.
ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 286 ರನ್ಗಳ
ಬೃಹತ್ ರನ್ ಕಲೆ ಹಾಕಿತು.ಗುರಿ ಬೆನ್ನತ್ತಿದ ರಾಜಸ್ಥಾನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 242 ರನ್ ಗಳಿಸಿತು. ರಾಯಲ್ಸ್ಗೆ 44 ರನ್ಗಳ ಸೋಲು ಕಂಡಿತು. ಇಶಾನ್ ಕಿಶನ್ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 106 ರನ್ ಗಳಿಸಿದರು. ಟ್ರಾವಿಸ್ ಹೆಡ್ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 67 ರನ್ ಸಿಡಿಸಿದರು.
ಎಸ್ಆರ್ಎಚ್ನ ಸ್ಕೋರು ಐಪಿಎಲ್ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಸ್ಕೋರ್. ಈ ಹಿಂದೆ ಹೈದರಾಬಾದ್ ತಂಡವು ಆರ್ಸಿಬಿ ವಿರುದ್ಧ 3 ವಿಕೆಟ್ಗೆ 287 ರನ್ ಗಳಿಸಿತ್ತು.ರಾಯಲ್ಸ್ ಪರ ತುಷಾರ್ ದೇಶಪಾಂಡೆ 3, ಮಹೇಶ ತೀಕ್ಷಣ 2 ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಕಿತ್ತರು. ಸಂಜು ಸ್ಯಾಮ್ಸನ್ 66, ದ್ರುವ್ ಜುರೆಲ್ 70 ರನ್ಗಳಿಸಿ ಗಮನ ಸೆಳೆದರು. ಸನ್ ರೈಸರ್ಸ್ ಪರ ಹರ್ಷಲ್ ಪಟೇಲ್ ಹಾಗೂ ಸಂಜೀತ್ ತಲಾ 2 ವಿಕೆಟ್ ಪಡೆದರು.