ಹೈದ್ರಾಬಾದ್: ಕೇವಲ 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 167 ರನ್. ಸನ್ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಐಪಿಎಲ್ನ ಅತಿ ವೇಗದ ಗೆಲುವು ದಾಖಲಿಸಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ವರ್ಮ ಅವರ ಸ್ಪೋಟಕ ಬ್ಯಾಟಿಂಗ್ನೆರವಿನಿಂದ ಹೈದರಾಬಾದ್ 10 ವಿಕೆಟ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿತು.ಮೊದಲು ಬ್ಯಾಟಿಂಗ್ ಮಾಡಿದ
ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಹೈದ್ರಾಬಾದ್ ಪರ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ನಡೆಸಿ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಂಡರಿ ಸಿಕ್ಸರ್ಗಳ ಸುರಿ ಮಳೆಗೈದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ ತಲಾ ಎಂಟು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ ಅಜೇಯ 89 ರನ್ ಬಾರಿಸಿದರು. 28 ಎಸೆತ ಎದುರಿಸಿದ ಅಭಿಷೇಕ್ ಶರ್ಮ 8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಚಚ್ಚಿದರು.
ಮೊದಲು ಬ್ಯಾಟ್ ಮಾಡಿದ ಲಕ್ನೋ ಪರ ಆಯೂಷ್ ಬದೋನಿ 30 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 55 ರನ್ ಬಾರಿಸಿದರು. ನಿಕೋಲಾಸ್ ಪೂರನ್ 48, ಕೆ.ಎಲ್.ರಾಹುಲ್ 29, ಕ್ರೂನಾಲ್ ಪಾಂಡ್ಯ 24 ರನ್ ಬಾರಿಸಿದರು.