ಕಲ್ಲಪಳ್ಳಿ: ಪನತ್ತಡಿ ಗ್ರಾಮ ಪಂಚಾಯತಿನ 2023-24ರ ಉದ್ಯೋಗ ಖಾತರಿ ಯೋಜನೆಯ 5 ಲಕ್ಷ ವೆಚ್ಚದಲ್ಲಿ ದೊಡ್ಡಮನೆ ದಂಡಡ್ಕ ರಸ್ತೆಯಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣದ
ಉದ್ಘಾಟನೆ ನಡೆಯಿತು. ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಎ ವಹಿಸಿದ್ದರು. ಪ್ರಮುಖರಾದ ಡಿ.ಎಲ್.ಜಯರಾಮ, ವಿವೇಕಾನಂದ ಡಿ.ಎಲ್, ಧನರಾಜ್ ಡಿ.ಡಿ, ಶರತ್ ಡಿ.ಡಿ, ಧನಂಜಯ, ಗಿರಿಜಾ ಕೆ, ಪುಷ್ಪಾವತಿ, ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.