ಸುಳ್ಯ:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ನಡೆಯುತ್ತಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಯ ಎಸ್ಐಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಮುಟ್ಟಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು
2,08,487 ಮತದಾರರಿದ್ದಾರೆ. ಜುಲೈ 23ರ ತನಕ
2,08,487 ಗಣತಿ ನಮೂನೆಗಳನ್ನು (ಎನ್ಯುಮರೇಷನ್ ಫಾರ್ಮ್) ಹಂಚಿಕೆ ಮಾಡಲಾಗಿದ್ದು ಶೇ.100 ಪೂರ್ತಿಯಾಗಿದೆ. 1,84,618 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದ್ದು ಶೇ.88.55 ಪೂರ್ತಿಯಾಗಿದೆ. ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ಗಣತಿ ನಮೂನೆಗಳನ್ನು ಮತದಾರರಿಗೆ ನೀಡಲಾಗಿದೆ. ಈ ನಮೂನೆಯಲ್ಲಿ ಭರ್ತಿ ಮಾಡಿ ಪಡೆದು ಡಿಜಿಟೈಸ್ ಮಾಡಲಾಗುತ್ತದೆ. ಆ.8ರ ವರೆಗೆ ಮನೆ ಮನೆ ಭೇಟಿ ನಡೆಯಲಿದೆ.








