ಸುಳ್ಯ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ‘ಅಭಿವಿನ್ಯಾಸ ಕಾರ್ಯಕ್ರಮ’ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಎನ್. ಪಿ. ಅವರು ಉದ್ಘಾಟಿಸಿದರು. ಡಾ. ಶಿವಾನಂದ ಜಿ. ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕಿ ಡಾ. ಪ್ರೀತಿ ಕೆ. ರಾವ್ ಕಾಲೇಜಿನ ಶೈಕ್ಷಣಿಕ ಹಾಗೂ
ಸಹಪಠ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಸತೀಶ್ ಕುಮಾರ್ ಕೆ. ಆರ್. ಶಿಸ್ತು ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.
ಪ್ರೊ. ಕಿಶೋರ್ ಕುಮಾರ್ ಬಿ. ಡಿ. ವಂದಿಸಿದರು. ಪ್ರೊ. ರಾಮಕೃಷ್ಣ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಡಾ.ಶೈಲಜಾ ಎನ್. ಆರ್., ಡಾ.ಮೋನಿಷಾ, ಪ್ರೊ.ಮಂಜುನಾಥ ಬಿ. ಹಾಗೂ ಪ್ರೊ. ಭಾಸ್ಕರ ಉಪಸ್ಥಿತರಿದ್ದರು.








