ಸುಳ್ಯ:ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ. ವಿ. ಮತ್ತು ಮನೆಯವರು ಶ್ರೀ ಮಲ್ಲಿಕಾರ್ಜುನ ದೇವರ ಮೂಲ ಅಂಗಕ್ಕೆ ಚಿನ್ನದ ತ್ರಿನೇತ್ರ ಸಹಿತ ಬೆಳ್ಳಿಯ ಕವಚ ಅ.7ರಂದು ಸಮರ್ಪಣೆ ಮಾಡಿದರು. ಮಧ್ಯಾಹ್ನ 12 ಗಂಟೆಗೆ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ

ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.ಡಾ.ರೇಣುಕಾ ಪ್ರಸಾದ್ ಕೆ.ವಿ, ಪತ್ನಿ ಡಾ.ಜ್ಯೋತಿ ಆರ್.ಪ್ರಸಾದ್, ಮಕ್ಕಳಾದ ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ ಅವರು ಪ್ರಾರ್ಥನೆ ನಡೆಸಿ ಕವಚ ಸಮರ್ಪಣೆ ಮಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರಾದ

ಎನ್.ಎ.ರಾಮಚಂದ್ರ, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಪಿ.ಬಿ.ಸುಧಾಕರ ರೈ,ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ಯಶೋಧ ರಾಮಚಂದ್ರ, ಕಿಶೋರ್ ಕುಮಾರ್ ಉಳುವಾರು, ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ಅಶೋಕ್ ಪೀಚೆ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ದಿನೇಶ್ ಮಡ್ತಿಲ, ಶಿವರಾಮ ಕೇರ್ಪಳ, ಕಲ್ಲುಗದ್ದೆ, ಸೋಮಶೇಖರ್ ಪೈಕ, ವಸಂತ ಕಿರಿಭಾಗ, ಕುಶಾಲಪ್ಪ ಪೆರುವಾಜೆ, ಎಸ್.ಆರ್ ಸೂರಯ್ಯ, ಕೆ.ಸಿ.ಸದಾನಂದ, ಮುಗುಪ್ಪು ಕೂಸಪ್ಪ ಗೌಡ, ಬೂಡು ರಾಧಾಕೃಷ್ಣ ರೈ, ವಾರಿಜ ಕುರುಂಜಿ, ಜಾಕೆ ಮಾಧವ ಗೌಡ, ಗಿರೀಶ ಕಲ್ಲುಗದ್ದೆ, ಎನ್.ಎ. ಜಿತೇಂದ್ರ, ನಾರಾಯಣ ಕೇಕಡ್ಕ, ಸುನಿಲ್ಕೇರ್ಪಳ, ಮೋಹನ್ ರಾಂ ಸುಳ್ಳಿ,ಡಾ.ಮನೋಜ್ ಅಡ್ಡಂತ್ತಡ್ಕ, ಡಾ.ರೇವಂತ್, ಕಮಲಾಕ್ಷ ನಂಗಾರು, ದೊಡ್ಡಣ್ಣ ಬರೆಮೇಲು,ದಯಾನಂದ ಕುರುಂಜಿ, ಭಾರತಿ ಪುರುಷೋತ್ತಮ, ಗೀತಾ ಶೇಖರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
















