ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಅಡ್ಕಾರಿನ ಕ್ರಿಯೇಟಿವ್ ಕಲಾವಿದ ಶಶಿ ಅಡ್ಕಾರ್ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪುರಸ್ಕಾರ ನೀಡಲಾಯಿತು.
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ
ವಲಯ ಸಂಯೋಜಕ ಲೋಕೇಶ್ ಆಕ್ರಿಕಟ್ಟೆ ಪ್ರಶಸ್ತಿ ಪ್ರದಾನ ಮಾಡಿದರು. ಯಶ್ವಿತ್ ಕಾಳಂಮನೆ ಅಭಿನಂದನಾ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿಯ ಮಾಜಿ ಅಧ್ಯಕ್ಷರಾದ ಸದಾನಂದ ಜಾಕೆ, ಸುರೇಶ್ ಕಾಮತ್ ಜಯನಗರ, ಉಪ ವಲಯಾರಣ್ಯಾಧಿಕಾರಿ ರಂಜಿತಾ ಪಿ., ಜಾಲ್ಸೂರು ಗ್ರಾಮ ಪಂಚಾಯತ್ ಸಿಬ್ಬಂದಿ ಚಿದಾನಂದ ಉಪಸ್ಥಿತರಿದ್ದರು. ಪ್ರಸನ್ನ ಎಂ.ಆರ್. ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸತ್ಯಶಾಂತಿ ತ್ಯಾಗಮೂರ್ತಿ ಜೇಸಿವಾಣಿ ವಾಚಿಸಿದರು. ಪೂರ್ಣಿಮಾ ಕಾರಿಂಜ ಸನ್ಮಾನ ಪತ್ರ ವಾಚಿಸಿದರು.
ವಿನೋದ್ ಮೂಡಗದ್ದೆ ವಂದಿಸಿದರು.


















