ಬೆಳ್ಳಾರೆ:ಸಂಸ್ಕೃತಿಯ ಉಳಿವಿಗೆ ಭಾಷೆಯ ಉಳಿವು ಅತ್ಯಂತ ಮುಖ್ಯ. ಅರೆಭಾಷೆಯ ಮೂಲಕ ಅನೇಕ ಆಚಾರ-ವಿಚಾರ, ಸಂಸ್ಕೃತಿಗಳನ್ನು ಅರಿಯುವುದರ ಜೊತೆಗೆ ಅದರೊಳಗೆ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ ಎಂದು ವಿ.ಟಿ.ಯು. ಬೆಳಗಾವಿ ವಿಶ್ರಾಂತ ಪ್ರಾದೇಶಿಕ ನಿರ್ದೇಶಕ ಡಾ.ಶಿವಕುಮಾರ್ ಹೊಸೊಳಿಕೆ ಹೇಳಿದರು.
ಅವರು ಬೆಳ್ಳಾರೆಯ
ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಅರೆಭಾಷೆ ಐಸಿರಿ’ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅರೆಭಾಷೆಯ ಬೆಳವಣಿಗೆ ಮತ್ತು ಅದರ ಮಹತ್ವವನ್ನು ಪಸರಿಸುವ ಉದ್ದೇಶದಿಂದ ಶಾಲೆ-ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಾಲಸುಬ್ರಮಣ್ಯ ಪಿ.ಎಸ್,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ರಾಮಚಂದ್ರ ಕೆ. ಮಾತನಾಡಿದರು.ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಲತಾಪ್ರಸಾದ್ ಕುದ್ದಾಜೆ ಹಾಗೂ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಿಖಿನ್ ಎಸ್., ಉಪಾಧ್ಯಕ್ಷ ಪ್ರಿಯಾಂಕ ಬಿ.ಎಚ್., ಕಾರ್ಯದರ್ಶಿ ಶ್ರೇಯಾ ಎ.ಪಿ., ಸಂಯೋಜಕ ಮನೋಜ್ ಉಪಸ್ಥಿತರಿದ್ದರು.
ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ಎನ್.ಎ. ಜ್ಞಾನೇಶ್ ಉದ್ಘಾಟಕರ ಪರಿಚಯ ವಾಚಿಸಿದರು.ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.ಶ್ರೇಯಾ ಎ.ಪಿ. ವಂದಿಸಿದರು.


















