ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೇಗದ 50 ವಿಕೆಟ್ ಗಳಿಸಿದ ದಾಖಲೆಗೆ ಭಾರತದ ವೇಗಿ ಮೊಹಮ್ಮದ್ ಶಮಿ ಭಾಜನರಾಗಿದ್ದಾರೆ.ಮುಂಬೈನ ವಾಂಖೆಡೆ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ. ಮೊಹಮ್ಮದ್ ಶಮಿ 17ನೇ ಇನಿಂಗ್ಸ್ನಲ್ಲಿ 50 ವಿಕೆಟ್ಗಳ ಸಾಧನೆ ಮಾಡಿದ್ದಾರೆ.ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್ ಗಳಿಸಿದ ಭಾರತದ
ಮೊದಲ ಬೌಲರ್ ಎಂಬ ಗೌರವಕ್ಕೂ ಶಮಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್ ಗಳಿಸಿದ ಏಳನೇ ಬೌಲರ್ ಎನಿಸಿದ್ದಾರೆ. ಈ ವಿಶ್ವಕಪ್ನಲ್ಲಿ 3ನೇ ಬಾರಿಗೆ ಶಮಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಒಟ್ಟಾರೆಯಾಗಿ ವಿಶ್ವಕಪ್ನಲ್ಲಿ 4 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ವಿಶ್ವಕಪ್ನಲ್ಲಿ ಕೇವಲ 6 ಪಂದ್ಯಗಳಿಂದ ಶಮಿ 23 ವಿಕೆಟ್ ಉರುಳಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧ 57 ರನ್ ನೀಡಿ 7 ವಿಕೆಟ್ ಉರುಳಿಸಿದ ಶಮಿ ಪ್ಲೇಯರ್ ಆಪ್ ದಿ ಮ್ಯಾಚ್ ಆದರು. ಶಮಿಗಿಂತ ಮೊದಲು 50 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು:
ಗ್ಲೆನ್ ಮೆಕ್ಗ್ರಾಥ್ (71)ಮುತ್ತಯ್ಯ ಮುರಳೀಧರನ್(68),ಮಿಚೆಲ್ ಸ್ಟಾರ್ಕ್(59),ಲಸಿತ್ಮಾಲಿಂಗ(56) ವಾಸೀಂ ಅಕ್ರಮ್(55) ಟ್ರೆಂಟ್ ಬೌಲ್ಟ್(53)











