ಚೆನ್ನೈ:ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಸತತ ಎರಡನೇ ಜಯ ದಾಖಲಿಸಿತು. ಚೆನ್ನೈ ತಂಡವು 32 ರನ್ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತು.ಸಂಜು ಸ್ಯಾಮ್ಸನ್ (48;32ಎ), ಡಿವಾಲ್ಡ್ ಬ್ರೆವಿಸ್ (41;29ಎ) ಆಯುಷ್ ಮ್ಹಾತ್ರೆ (38; 17ಎ, 4X6, 6X2)ಅವರ ಬ್ಯಾಟಿಂಗ್ ಬಲದಿಂದ
ಚೆನ್ನೈ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗೆ 192 ರನ್ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡದ ಅಗ್ರ ಬ್ಯಾಟರ್ಗಳಿಗೆ ಅಫ್ಗಾನಿಸ್ತಾನದ ಸ್ಪಿನ್ನರ್ ನೂರ್ ಅಹಮದ್ (21ಕ್ಕೆ 3) ಪೆವಿಲಿಯನ್ ದಾರಿ ತೋರಿಸಿದರು. ಇದರಿಂದಾಗಿ ತಂಡವು 7 ವಿಕೆಟ್ಗೆ 160 ರನ್ ಗಳಿಸಿ ಹೋರಾಟ ಮುಗಿಸಿತು. ಸುನಿಲ್ ನಾರಾಯಣ್ (24), ರಹಾನೆ (28) ಮತ್ತು ಅಂಗಕ್ರಿಷ್ ರಘುವಂಶಿ (27 ರೋವ್ಮನ್ ಪೊವೆಲ್ (ಔಟಾಗದೇ 31;22ಎ) ಮತ್ತು ರಮಣದೀಪ್ ಸಿಂಗ್ (35;23ಎ) ಕೊಂಚ ಹೋರಾಟ ನಡೆಸಿದರು.
















