ಹೈದರಾಬಾದ್: ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕಗಳ ಬಳಿಕ ವೇಗಿ ಇಶಾನ್ ಮಾಲಿಂಗ ಪರಿಣಾಮಕಾರಿ ಬೌಲಿಂಗ್ ದಾಳಿ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಶನಿವಾರ ಐಪಿಎಲ್ನ ಪಂದ್ಯದಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ಗಳ ರೋಚಕ ಜಯ ಸಾಧಿಸಿತು. ಅಭಿಷೇಕ್ (59;22ಎ, 4X6, 6X4) ಮತ್ತು ಕ್ಲಾಸೆನ್ (59;39ಎ, 4X6, 6X2) ಅವರ ಬ್ಯಾಟಿಂಗ್ ಬಲದಿಂದ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 194 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಮಲಿಂಗ (29ಕ್ಕೆ 3) ಮತ್ತು ನಿತೀಶ್ ಕುಮಾರ್ ರೆಡ್ಡಿ (31ಕ್ಕೆ 2) ಕಡಿವಾಣ ಹಾಕಿದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಚೆನ್ನೈ ತಂಡ 8 ವಿಕೆಟ್ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಆಯುಷ್ ಮ್ಹಾತ್ರೆ (30), ಮ್ಯಾಥ್ಯೂ ಶಾರ್ಟ್ (34) ಮತ್ತು ಸರ್ಫರಾಜ್ ಖಾನ್ (25) ಕೊಂಚ ಹೋರಾಟ ತೋರಿದರು.
















