ಸುಳ್ಯ:ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸರಕಾರದ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಹಿನ್ನಲೆಯಲ್ಲಿ ಶಕ್ತಿ – ಸಂಭ್ರಮಾಚರಣೆ ಕಾರ್ಯಕ್ರಮ ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ 500 ಕೋಟಿ ಫಲಾನುಭವಿಗಳು ಸರಕಾರದ
ಯೋಜನೆ ಪಡೆದುಕೊಂಡಿರುವುದಕ್ಕೆ ಸಾಧನೆಯ ಸ್ಟಿಕ್ಕರ್ ಬಿಡುಗಡೆಗೊಳಿಸಿ, ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಕೆ.ಪಿ.ಸಿ.ಸಿ. ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ,
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಸದಸ್ಯೆ ಕಾಂತಿ ಬಿ.ಎಸ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಸುಂದರಿ ಮುಂಡಡ್ಕ, ಲಲನಾ ಕೆ.ಆರ್., ವಿಮಲ ಪ್ರಸಾದ್, ಸುಜಯ ಕೃಷ್ಣ, ಲಿಸ್ಸಿ ಮೋನಾಲಿಸ,
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಲತೀಫ್ ಅಡ್ಕಾರ್, ರಾಜು ನೆಲ್ಲಿಕುಮೇರಿ, ಧನುಷ್ ಕುಕ್ಕೆಟ್ಟಿ, ಶೇಖರ್ ಕಣೆಮರಡ್ಕ, ಇಬ್ರಾಹಿಂ ಶಿಲ್ಪಾ, ಸೋಮಶೇಖರ್ ಕೇವಳ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ,
ನ.ಪಂ. ನಾಮನಿರ್ದೇಶನ ಸದಸ್ಯ ರಾಜು ಪಂಡಿತ್, ಪ್ರಮುಖರಾದ ಬೆಟ್ಟ ರಾಜಾರಾಂ ಭಟ್, ಕೆ.ಗೋಕುಲ್ ದಾಸ್, ಬೆಟ್ಟ ಜಯರಾಮ್ ಭಟ್, ಮಹೇಶ್ ಬೆಳ್ಳಾರ್ಕರ್, ಭೋಜಪ್ಪ ನಾಯ್ಕ್, ಸುರೇಶ್ ಎಂ.ಹೆಚ್., ಶಿವಕುಮಾರ್ ಕಂದಡ್ಕ, ಮಂಜುನಾಥ್ ಮಡ್ತಿಲ, ಧರ್ಮಪಾಲ ಕೊಯಿಂಗಾಜೆ, ಡೇವಿಡ್ ಧೀರ ಕ್ರಾಸ್ತ, ರಂಜಿತ್ ಮೇನಾಲ, ಜಯಪ್ರಕಾಶ್ ನೆಕ್ರಪ್ಪಾಡಿ, ಚಿತ್ರಾವತಿ ಪಾಲಡ್ಕ, ಮೀನಾಕ್ಷಿ ಸತ್ಯಕುಮಾರ್ ಆಡಿಂಜ, ಜಮಾಲುದ್ದೀನ್ ಪಂಜ ಮೊದಲಾದವರಿದ್ದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.












