ಸುಳ್ಯ:ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ, ರೆಡ್ ಕ್ರಾಸ್ ಯುನಿಟ್ ಕೆ.ವಿ.ಜಿ ದಂತ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಕೆ.ವಿ.ಜಿ ದಂತ
ಮಹಾವಿದ್ಯಾಲಯ ಮತು ಕೆ.ವಿಜಿ ತಾಂತ್ರಿಕ ಮಹಾ ವಿದ್ಯಾಲಯ ಹಾಗೂ ಇವುಗಳ ಸಂಯುಕ್ತ ಆಶಯದಲ್ಲಿ ರಕ್ತದಾನ ಶಿಬಿರ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ರಕ್ತದಾನದ ಅವಶ್ಯಕತೆಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಅಗಮಿಸಿದ ಸುಳ್ಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಪಿ. ಬಿ. ಸುಧಾಕರ ರೈ ಅವರು ರಕ್ತದಾನದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳು ಮತ್ತು ರಕ್ತದಾನದಿಂದಾಗುವ ಆರೋಗ್ಯ ವೃದ್ಧಿಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಎನ್.ಎಸ್.ಎಸ್. ಘಟಕದ ಘಟಕಾಧಿಕಾರಿ ಮತ್ತು ಪ್ರಾಧ್ಯಪಕರಾದ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ, ಕಾಲೇಜಿನ ರೆಡ್ ಕ್ರಾಸ್ ಯುನಿಟ್ನ ಅಧಿಕಾರಿ ಡಾ. ದಿಭಾಕರ್,ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಯೋಜಕರಾದ ಪ್ರವೀಣ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ೮೫ ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಶೈಲಾ ಪೈ.
ವಿಭಾಗ ಮುಖ್ಯಸ್ಥರುಗಳಾದ ಡಾ. ನುಸ್ರತ್ ಫರಿದ್, ಡಾ. ಪ್ರಸನ್ನ ಕುಮಾರ್ ಡಿ., ಡಾ ದಯಾಕರ್ ಎಂ.ಎಂ.,ಪ್ರಾಧ್ಯಪಕರುಗಳಾದ ಡಾ. ಮಹಬಲೇಶ್ವರ, ಡಾ. ದೇವಿ ಪ್ರಸಾದ್ ನೂಜಿ, ಆಡಳಿತಾಧಿಕಾರಿ ಮಾಧವ ಬಿ ಟಿ.,ಎ.ಓ.ಎಲ್.ಇ ಕಮಿಟಿ ‘ಬಿ’ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಎ.ಓ.ಎಲ್.ಇ ಕಮಿಟಿ ‘ಬಿ’ ಆಡಳಿತ ಕಛೇರಿ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಸಾರ್ವಜನಿಕ
ಸಂಪರ್ಕಧಿಕಾರಿ ಜಯಂತ್ ತಳೂರು, ರಕ್ಷಿತ್ ನಿಡಿಂಜಿ, ಮತ್ತು ಕೆ.ವಿ.ಜಿ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







