ಐವರ್ನಾಡು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ ಐವರ್ನಾಡು ಪಾಲೆ ಪಾಡಿ ದೇವರ ಖಾನ ಒಕ್ಕೂಟದ ಮತ್ತು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ವತಿಯಿಂದ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಘಗಳಿಗೆ ಲಾಭಾಂಶ ವಿತರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪಂಚಲಿಂಗೇಶ್ವರ ದೇವಸ್ಥಾನದ ಮಹಾಪೂಜೆಯೊಂದಿಗೆ
ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು. ಫೆ.2ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘಗಳಿಗೆ ಲಾಭಾಂಶ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಎಸ್ಎನ್ ಮನ್ಮಥ ವಹಿಸಿದ್ದಾರೆ. ಧಾರ್ಮಿಕ ಸಭಾದ ಆಶೀರ್ವಚನವನ್ನು ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನ್ದಾಸ ಸ್ವಾಮೀಜಿ ಆಶೋ
ಈರ್ವಚನ ನೀಡುವರು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು
ಈ ದಿನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಅಧ್ಯಕ್ಷರು ಎಸ್ ಎನ್ ಮನ್ಮಥ ಪದಾಧಿಕಾರಿಗಳು ರವಿನಾಥ ಜೆ.ಟಿ ವೆಂಕಪ್ಪ ಗೌಡ ಜಯಂತ್ ಟಿ, ಮಹೇಶ್ ಜಬಳೆ, ದಾಮೋದರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ವಲಯ ಅಧ್ಯಕ್ಷರಾದ ವೇದ ಹೆಚ್ ಶೆಟ್ಟಿ, ವಲಯ ಮೇಲ್ವಿಚಾರಕರಾದ ವಿಶಾಲ ಐವರ್ನಾಡು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಬೆಳ್ಳಾರೆ ವಲಯದ ಸೇವಾ ಪ್ರತಿನಿಧಿಗಳು ಅಶ್ವಿನಿ, ಗೀತಾ ಹರಿಣಿ ದಿವ್ಯ ಸ್ಥಳೀಯ ಸೇವಾ ಪ್ರತಿನಿಧಿಯಾದ ರಶ್ಮಿತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.