ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಂಡ ಕೃತಿಗಳ ಬಿಡುಗಡೆ ಕಾರ್ಯಕ್ರಮ ನ.23 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ಅವರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಟು ಸಾಹಿತ್ಯ ಕೃತಿ ಹಾಗೂ ಮೂರು ಸಾಧಕರ ಕುರಿತ ಕೃತಿಗಳು ಬಿಡುಗಡೆಗೊಂಡಿತು. ನಂದಕುಮಾರ್ ಸ್ವಾಮಿ ರಚಿಸಿದ ಕೃತಿ ‘ಪ್ರಗತಿ ಶೀಲ ಬರಹಗಾರ ನಿರಂಜನ’, ದುರ್ಗಾಕುಮಾರ್ ನಾಯರ್ಕೆರೆ ರಚಿಸಿದ ‘ಸಾಹಿತ್ಯ ಲೋಕದ ಸವ್ಯಸಾಚಿ ಟಿ. ಜಿ ಮುಡೂರು’,ಕುಮಾರಸ್ವಾಮಿ ತೆಕ್ಕುಂಜ ರಚಿಸಿದ ಕೃತಿ ‘ಸುಮನಸ್ಸಿನ ಪರಿಸರ ಕವಿ ಜಿ.ಎಸ್.ಉಬರಡ್ಕ’, ಚಂದ್ರಾವತಿ ಬಡ್ಡಡ್ಕ ರಚಿಸಿದ ‘ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ’ ರಾಮಚಂದ್ರ ಪಲ್ಲತ್ತಡ್ಕ ರಚಿಸಿದ ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ), ಸ್ಮಿತಾ ಅಮೃತ ರಾಜ್ ರಚಿಸಿದ ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ.ಪ್ರಭಾಕರ ಶಿಶಿಲ, ಲೀಲಾ ದಾಮೋದರ ರಚಿಸಿದ ‘ಜೀವನ್ಮುಖಿ ಅಮ್ಮ ಎಂ.ಜಿ.ಕಾವೇರಮ್ಮ’ ಯಶ್ವಿತ್ ಕಾಳಮ್ಮನೆ ರಚಿಸಿದ ಹಳಬರ ಜೋಳಿಗೆಯ ಜಯಮ್ಮ ಚೆಟ್ಟಿಮಾಡ, ಸುಳ್ಯ ತಾಲೂಕಿನ ಸಾಧಕರ
ಪರಿಚಯ ಮಾಲಿಕೆಯಲ್ಲಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರಚಿಸಿದ ವೈದ್ಯಕೀಯ ಕ್ಷೇತ್ರದ ಮೇರು ಸಾಧಕ ಡಾ.ಕೆ ವಿ. ಚಿದಾನಂದ, ತೇಜಸ್ವಿ ಕಡಪಾಲ ರಚಿಸಿದ ‘ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್, ಚಂದ್ರಮತಿ.ಕೆ ರಚಿಸಿದ ಸಾಹಿತ್ಯದ ಸಾರಥಿ ಎಂ. ಮೀನಾಕ್ಷಿ ಗೌಡ ಕೃತಿಗಳು ಬಿಡುಗಡೆಗೊಂಡಿತು.ಸಮಾರಂಭದಲ್ಲಿ
ಹಿರಿಯ ಸಾಹಿತಿಗಳಾದ ಡಾ.ಪ್ರಭಾಕರ ಶಿಶಿಲ, ಕುತ್ಯಾಳ ನಾಗಪ್ಪ ಗೌಡ(ಕಿರಣ), ಜಯಮ್ಮ ಚೆಟ್ಟಿಮಾಡ, ಎಂ.ಮೀನಾಕ್ಷಿ ಗೌಡ, ಡಾ.ಹರಪ್ರಸಾದ್ ತುಸಿಯಡ್ಕ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ, ಕೋಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ,ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಉಪಸ್ಥಿತರಿದ್ದರು.ತೇಜಸ್ವಿ ಕಡಪಳ ಸ್ವಾಗತಿಸಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ ವಂದಿಸಿದರು, ಚಂದ್ರಮತಿ. ಕೆ, ಕಾರ್ಯಕ್ರಮ ನಿರೂಪಿಸಿದರು.
















